ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಬಳಿಯ ಮರ್ಪಿ ತೋಟ ಎಂಬಲ್ಲಿ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮೃತ ಆಟೋ ಚಾಲಕನನ್ನು ಸ್ಥಳೀಯ ನಿವಾಸಿ ಮೊಹಮ್ಮದ್ ರಫೀಕ್(53) ಎಂದು ಗುರುತಿಸಲಾಗಿದೆ.
ಮೃತ ಆಟೋ ಚಾಲಕ ಮಹಮ್ಮದ್ ರಫೀಕ್ ಬಪ್ಪನಾಡು ಬಳಿಯ ತಾಯಿ ಮನೆಯಲ್ಲಿ ಎಂದಿನಂತೆ ಮಧ್ಯಾಹ್ನ ಊಟಕ್ಕೆ ಬಂದಿದ್ದು ಸ್ವಲ್ಪ ಊಟ ಮಾಡಿ ತನ್ನ
ಕೋಣೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಮಲಗಲು ಹೋದವರು ಸಂಜೆಯಾದರೂ ಬಾಗಿಲು ತೆರೆಯದನ್ನು ಕಂಡು ತಾಯಿ ಗಾಬರಿಯಿಂದ ಮುಲ್ಕಿ ಆಟೋ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಯವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಸಂತೋಷ್ ಶೆಟ್ಟಿ ಮತ್ತಿತರರು ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಅಬ್ದುಲ್ ರಫೀಕ್ ಕೋಣೆಯ ಪಕ್ಕಾಸಿಗೆ ಚೂಡಿದಾರ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮುಲ್ಕಿ ಠಾಣಾ ಎಸ್ಐ ವಿನಾಯಕ ತೋರಗಲ್ ಭೇಟಿ ನೀಡಿ ಪರಿಶೀಲಿಸಿದ್ದು ಕೋಣೆಯಲ್ಲಿ ಡೈರಿ ಸಿಕ್ಕಿದ್ದು ಮರಣ ಪತ್ರದಲ್ಲಿ ಹಿಂದೂ ಸಂಸ್ಕೃತಿಯಂತೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಬೇಕೆಂದು ಹಾಗೂ ತನಗೆ ಸಹಕಾರ ನೀಡಿದ ಆಟೋ ಫ್ರೆಂಡ್ಸ್ ಮುಲ್ಕಿ ಬಗ್ಗೆ ಆಭಾರಿಯಾಗಿದ್ದೇನೆ ಎಂದು ಬರೆದಿದ್ದಾನೆ.
ಹಣಕಾಸಿನ ಮುಗ್ಗಟ್ಟಿನಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಮುಲ್ಕಿಯಲ್ಲಿ ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಆಟೋ ಚಾಲಕನಾಗಿದ್ದು ಜನಾನುರಾಗಿಯಾಗಿದ್ದ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದು ಮನೆಯಲ್ಲಿ ರೋದನ ಮುಗಿಲು ಮುಟ್ಟಿದೆ.
Kshetra Samachara
18/09/2021 09:24 pm