ಮುಲ್ಕಿ: ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿ ರಾಬಿಯಾ ಸೈಫಿ ಅತ್ಯಾಚಾರಗೈದು ಮೃಗೀಯವಾಗಿ ಬರ್ಬರ ಹತ್ಯೆಯನ್ನು ಖಂಡಿಸಿ ಹಳೆಯಂಗಡಿ ವಲಯದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗ್ರಾಮ ಸಮಿತಿ ವತಿಯಿಂದ ಹಳೆಯಂಗಡಿ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮುಖ್ಯ ಭಾಷಣಗಾರರಾಗಿ ಎಸ್‌ಡಿಪಿಐ ಜಿಲ್ಲಾ ಮುಖಂಡ ಅಶ್ರಫ್ ಕೆ. ಸಿ. ರೋಡ್ ಮಾತನಾಡಿ, ಸಹೋದರಿ ರಾಬಿಯಾ ಸೈಫಿಯಾಳ ನ್ಯಾಯಕ್ಕಾಗಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಕೇಂದ್ರ ಸರ್ಕಾರ ವಿಧಿಸಬೇಕಾಗಿ ಒತ್ತಾಯಿಸಿದರು. ಹಳೆಯಂಗಡಿ ಎಸ್‌ಡಿಪಿಐ ವಲಯ ಅಧ್ಯಕ್ಷ ಹಾರಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಘಟನೆಯನ್ನು ಖಂಡೀಸಿದರು.
ಎಸ್‌ಡಿಪಿಐ ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷ ಇಕ್ಬಾಲ್ ಎಂ. ಬಿ ಧನ್ಯವಾದ ಅರ್ಪಿಸಿದರು. ಮುಲ್ಕಿ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.
Kshetra Samachara
17/09/2021 10:22 pm