ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಹರೀಶ್ ಕುಂಬಾಶಿ ಎಂಬ ವ್ಯಕ್ತಿ ಅಸಂವಿಧಾನಾತ್ಮಕ ಪದ ಬಳಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.ಈ ಮೂಲಕ ಅಸಂಖ್ಯಾತ ಬಿಲ್ಲವ ಸಮಾಜದ ಗುರುಗಳ ,ಅನುಯಾಯಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.
ಬಿಲ್ಲವ ಸಮುದಾಯ ಹಾಗೂ ಇತರ ಸಮುದಾಯದವರು ಭಾರತದಾದ್ಯಂತ ಗುರುಗಳ ತತ್ವ ಆದರ್ಶಗಳನ್ನು ಒಪ್ಪಿ ಗುರುಗಳಿಗೆ ದೇವಸ್ಥಾನಗಳನ್ನು ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಪೂಜಿಸಿ ಅವರನ್ನು ಗೌರವಿಸುತ್ತಿದೆ.
ಇಂತಹ ಮಹಾನ್ ವ್ಯಕ್ತಿಗೆ ಅಗೌರವ ತೋರಿರುವ ಹರೀಶ್ ಕುಂಬಾಶಿ ಅವರು ನಾರಾಯಣಗುರು ಸನ್ನಿಧಿಗೆ ಬಂದು ತಪ್ಪುಕಾಣಿಕೆ ಹಾಕಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಹರೀಶ್ ಕುಂಬಾಶಿಯವರ ಮೇಲೆ ಸಮುದಾಯದ ಗುರುಗಳಿಗೆ ಅವಹೇಳನ ಮಾಡಿ ಬಿಲ್ಲವ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ನೆಲೆಯಲ್ಲಿ ಸೆಕ್ಷನ್ 153 (ಎ) ಮತ್ತು ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸಾಮಾಜಿಕ ಮುಂದಾಳು ಪ್ರಮೋದ್ ಉಚ್ಚಿಲ ಮತ್ತು ಅನ್ಸಾರ್ ಅಹಮದ್ ಆಗ್ರಹಿಸಿದ್ದಾರೆ.
Kshetra Samachara
15/09/2021 02:54 pm