ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- ಆರೋಪಿಗೆ ಬಿದ್ವು ಧರ್ಮದೇಟು.!

ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿದ್ದು, ಬಳಿಕ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮೂಲತಃ ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸಿಸುವ ಆರೀಫ್ ಪಾಷಾ (30) ಬಂಧಿತ. ಆರೋಪಿ ಕೂಲಿ ಕಾರ್ಮಿಕನಾಗಿದ್ದಾನೆ.

ಬಾಲಕಿಯ ತಂದೆಯ ಪರಿಚಿತನಾಗಿರುವ ಆರೋಪಿ ಆರೀಫ್ ತಿಂಡಿ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಕಾಮುಕನಿಂದ ತಪ್ಪಿಸಿಕೊಂಡು ಓಡಲು ಆರಂಭಿಸಿದ್ದಳು. ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕ್‌ನಲ್ಲಿ ಬಾಲಕಿ ಓಡುತ್ತಿದ್ದ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ 'ಕಾಪಾಡಿ ಕಾಪಾಡಿ' ಎನ್ನುತ್ತಿದ್ದ ಬಾಲಕಿಯನ್ನು ಯಶು ಪಕಳ ದಂಪತಿ ಪ್ರಶ್ನಿಸಿದ್ದಾರೆ.

ಬಾಲಕಿ ಕೃತ್ಯವನ್ನು ತಿಳಿಸುತ್ತಿದ್ದಂತೆ, ಸ್ಥಳೀಯರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ ಅವರ ಸಹಕಾರದೊಂದಿಗೆ ಆರೋಪಿ ಆರೀಫ್ ಪಾಷಾನನ್ನು ಹಿಡಿದಿದ್ದಾರೆ. ಬಳಿಕ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

14/09/2021 05:06 pm

Cinque Terre

16.49 K

Cinque Terre

3

ಸಂಬಂಧಿತ ಸುದ್ದಿ