ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು; ಹಾಡಹಗಲೇ ಮಹಿಳೆಯ ಬ್ಯಾಗ್ ದರೋಡೆ ಯತ್ನ; ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಯಿತು ಕಳ್ಳರ ವಿಫಲ ಪ್ರಯತ್ನ

ಮಂಗಳೂರಲ್ಲಿ ಹಾಡಹಗಲೇ ಮಹಿಳೆಯ ಬ್ಯಾಗ್ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.

ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಈ ಘಟನೆ ನಡೆದಿದ್ದು, ಕಾರಿನಿಂದ ಬಂದ ಅಪರಿಚಿತರು ಕಾರಿನಿಂದ ಇಳಿದು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿದ್ದಾರೆ. ಇದೇ ವೇಳೆ ಬ್ಯಾಗ್ ಕಸಿಯಲು ಬಿಡದೇ ತನ್ನ ರಕ್ಷಣೆಗೆ ತಾನೇ ಮುಂದಾದ ಮಹಿಳೆಯು

ದರೋಡೆಗೆ ಕಾರಿನಿಂದ ಇಳಿದ ವ್ಯಕ್ತಿಗೆ ವಾಪಾಸ್ ಥಳಿಸಿ ಆತ್ಮರಕ್ಷಣೆ‌ ಮಾಡಿಕೊಂಡಿದ್ದಾರೆ.

ಇದೇ ವೇಳೆ ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಆರೋಪಿ ಯತ್ನಿಸಿದ್ದಾರೆ. ಆದರೆ ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೇ ಜನರು ಸೇರುವುದನ್ನು ನೋಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Edited By : Nagesh Gaonkar
Kshetra Samachara

Kshetra Samachara

12/09/2021 03:08 pm

Cinque Terre

20.05 K

Cinque Terre

9

ಸಂಬಂಧಿತ ಸುದ್ದಿ