ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿವಾಹಿತ ನವಜೋಡಿಯ ಮೇಲೆ ಕಳವು ಆರೋಪ- ದಂಪತಿ ಅರೆಸ್ಟ್

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಪುತ್ರಿಯನ್ನು ಲವ್ ಜಿಹಾದ್​ ನಡೆಸಿ, ಮದುವೆ ಮಾಡಿಕೊಳ್ಳಲಾಗಿದೆ ಎಂದು ಠಾಣೆಯ ಮಟ್ಟಿಲೇರಿದ ಹೆತ್ತವರು, ಮಗಳು ಮನೆಯಿಂದ ಚಿನ್ನ, ಹಣ ದೋಚಿದ್ದಳು ಎಂದು ದೂರು ದಾಖಲಿಸಿದ್ದರು. ಇದೀಗ ಪೋಲೀಸರು ನವಜೋಡಿಯನ್ನು ಕಳವು ಆರೋಪದ ಮೇಲೆ ಇಂದು ಬಂಧಿಸಿದ್ದಾರೆ.

ನವ ವಿವಾಹಿತರಾದ ರೇಷ್ಮಾ ಹಾಗೂ ಅಕ್ಬರ್ ಅಲಿ ಬಂಧಿತ ಆರೋಪಿಗಳು. ನಗರದ ಅರೋಮಾ ಪಾರ್ಕ್ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿರುವ ಹಜರತ್ ಅಲಿಯಾಸ್ ಯಶೋದಾ ಎಂಬವರು 22 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಬಗ್ಗೆ ಆಕೆಯ ಕುಟುಂಬ ಸೇಡು ತೀರಿಸಿಕೊಳ್ಳಲು ಆಕೆಯ ಪುತ್ರಿಯನ್ನು ಬಳಸಿಕೊಂಡಿದೆ ಎನ್ನಲಾಗಿದೆ. ಆಕೆಯ ಪುತ್ರಿ ರೇಷ್ಮಾಳಿಗೆ ಇತ್ತೀಚೆಗೆ ಹಿಂದೂ ಧರ್ಮದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಈ ನಡುವೆ ರೇಷ್ಮಾಳನ್ನು ಲವ್ ಜಿಹಾದ್ ಮಾಡಿ ಯಶೋದಾ ಸೋದರಿಯ ಮಗ ಗದಗದ ಅಕ್ಬರ್ ಅಲಿ ಎಂಬಾತನಿಗೆ ಮದುವೆ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ಅವರು ರೇಷ್ಮಾಳ ಬಳಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ತರುವಂತೆ ಪ್ರೇರೇಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಆಕೆ ಚಿನ್ನಾಭರಣ, ನಗದು ಸಹಿತ ಪರಾರಿಯಾಗಿ ಅಕ್ಬರ್ ಅಲಿಯನ್ನು ಮದುವೆಯಾಗಿದ್ದಳು‌. ಆದ್ದರಿಂದ ಜೋಡಿಯ ವಿರುದ್ಧ 1.90 ಲಕ್ಷ ರೂ. ಬೆಳ್ಳಿ, ಬಂಗಾರ ಕಳವುಗೈದಿರುವುದು ಹಾಗೂ ತಂದೆ-ತಾಯಿ ದುಡಿದು ಕೂಡಿಟ್ಟಿದ್ದ 90 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ಅಕ್ಬರ್ ಅಲಿ ಖಾತೆಗೆ ಜಮಾ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಂಗಳೂರು ಬರ್ಕೆ ಠಾಣೆ ಪೊಲೀಸರು ಅಕ್ಬರ್ ಅಲಿ ಹಾಗೂ ರೇಷ್ಮಾಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

12/09/2021 10:37 am

Cinque Terre

12.32 K

Cinque Terre

0

ಸಂಬಂಧಿತ ಸುದ್ದಿ