ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಗಣಪತಿ ಕಟ್ಟೆಯ ಅಲಂಕಾರಕ್ಕೆ ಇರಿಸಲಾಗಿದ್ದ ಬಾಳೆಗಿಡ ಚಲ್ಲಾಪಿಲ್ಲಿ

ನೆಲ್ಯಾಡಿ: ಉದನೆಯ ಗಣಪತಿ ಕಟ್ಟೆ ಹಾನಿಗೊಳಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.10ರಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಬಾಳೆಗಿಡಗಳನ್ನು ಪುಡಿಗೈಯ್ಯಲಾಗಿದ್ದು ಮೆಟ್ಟಿಲನ್ನು ಹಾನಿಗೊಳಿಸಲಾಗಿದೆ. ಕಲ್ಲು ಎತ್ತಿಹಾಕಿ ಮೆಟ್ಟಿಲು ಹಾನಿಗೊಳಿಸಿರುವುದಾಗಿ ವರದಿಯಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/09/2021 12:10 pm

Cinque Terre

19.24 K

Cinque Terre

0

ಸಂಬಂಧಿತ ಸುದ್ದಿ