ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದ ಕುಕ್ಕುಂದೂರಿನಲ್ಲಿ ಇವತ್ತು ಅಕ್ರಮ ಪ್ರಾರ್ಥನೆ- ಮತಾಂತರ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಾರ್ಥನಾ ಕೇಂದ್ರದಲ್ಲಿದ್ದವರಿಗೂ ಹಿಂದೂ ಸಂಘಟನೆಯರಿಗೂ ಸಂಘರ್ಷ ಏರ್ಪಟ್ಟಿದೆ.ಈ ವೇಳೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಆದರೆ ಇಲ್ಲಿ ನಡೆಯುತ್ತಿರುವ ಮತಾಂತರದ ಕೆಲವು exclusive ಫೋಟೋಗಳು ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.ಪವಿತ್ರ ನೀರಿನಲ್ಲಿ ಮುಳುಗಿಸಿ ಮತಾಂತರ ಮಾಡುವ ಫೋಟೋಗಳು ಇವು! ಬೆನೆಡಿಕ್ಟ್ ಕಾರ್ಕಳ ಎಂಬವರ ಪ್ರಾರ್ಥನಾ ವಿಧಿ ಇದಾಗಿದ್ದು,
ನೀರಿನಲ್ಲಿ ಮುಳುಗಿ ಎದ್ದ ನಂತರ ಕರ್ಮಗಳೆಲ್ಲ ದೂರವಾಗುತ್ತದೆ. ಹಾಗಾಗಿ ಸಾಮೂಹಿಕ ಪ್ರಾರ್ಥನೆಯ ನಂತರ ಪವಿತ್ರ ಸ್ನಾನದ ಹೆಸರಲ್ಲಿ ನೀರಲ್ಲಿ ಮುಳುಗಿಸಲಾಗುತ್ತದೆಯಂತೆ! ಈ ಫೋಟೋಗಳು ಪಬ್ಲಿಕ್ ನೆಕ್ಸ್ಟ್ ಗೆ ಸಿಕ್ಕಿದೆ.
Kshetra Samachara
10/09/2021 01:23 pm