ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಕ್ಷೇತ್ರ ಕೊಡ್ಯಡ್ಕ ದೇವಳದ ಆವರಣದಲ್ಲಿ ಇಲ್ಲಿನ ಆನೆ ಲಕ್ಷ್ಮೀ ಸೀನಿದಾಗ ಭಯಭೀತರಾಗಿ ಓಡಿದಾಗ ಕೂಲಿ ಕಾರ್ಮಿಕರೊಬ್ಬರು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಕಾರ್ಕಳ ತಾಲೂಕಿನ ವಿಶ್ವನಾಥ ದೇವಾಡಿಗ ಮೃತ ವ್ಯಕ್ತಿ. ಇವರು ಮಧ್ಯಾಹ್ನ ದೇವಸ್ಥಾನದಲ್ಲಿ ಆನೆ ಇರುವ ಸ್ವಳದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆನೆ ಒಮ್ಮೆಲೇ ಸೀನಿದಾಗ ಹೆದರಿ ಓಡಲು ಆರಂಭಿಸಿದ್ದಾರೆ. ಆದರೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/09/2021 11:41 am