ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿಯ ಉದ್ಯಮಿ ನಾಗರಾಜ್ ಎಂಬವರಿಗೆ ಭೂಗತಲೋಕದ ಪಾತಕಿ ಕಲಿಯೋಗೀಶ ನಿಂದ ಜೀವ ಬೆದರಿಕೆ ಬಂದಿದ್ದು ಮಂಗಳೂರು ಕಮಿಷನರ್ ಗೆ ದೂರು ನೀಡಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಇಂಟರ್ನೆಟ್ ನಂಬರ್ +8569 2598434 ಮುಖಾಂತರ ಉದ್ಯಮಿ ನಾಗರಾಜ್ ರವರಿಗೆ ಕರೆ ಬಂದಿದ್ದು ಆ ವ್ಯಕ್ತಿ ತುಳುವಿನಲ್ಲಿ ಮಾತನಾಡಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ 2017ರ ಡಿಸೆಂಬರ್ ನಲ್ಲಿ ಭೂಗತಲೋಕದ ಪಾತಕಿ ಕಲಿಯೋಗೀಶ ಅನೇಕಸಲ ಇಂಟರ್ನೆಟ್ ಮೂಲಕ ನಾಗರಾಜ್ ಮೊಬೈಲ್ ಗೆ ಫೋನ್ ಮಾಡಿದ್ದು ನಾಗರಾಜ್ ಕಾಲ್ ರಿಸೀವ್ ಮಾಡಿಲ್ಲ ಎಂದು ಆಕ್ರೋಶಗೊಂಡು ತನ್ನ ಸಹಚರರನ್ನು ಕಳಿಸಿ ನಾಗರಾಜ್ ರವರ ಮನೆಗೆ ಹಾಗೂ ಕಾರಿಗೆ ಮೂರು ಗುಂಡು ಹೊಡೆದು ಪರಾರಿಯಾಗಿದ್ದರು.
ಬಳಿಕ ನಡೆದ ಪೊಲೀಸರ ಕಾರ್ಯಾಚರಣೆಯಲ್ಲಿ ಕಲಿಯೋಗೀಶ ನ ಸಹಚರರೆನ್ನಲಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಂದಿಗೂ ಮೈಸೂರು ನ್ಯಾಯಾಲಯದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
Kshetra Samachara
05/09/2021 06:51 pm