ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯಲ್ಲಿ ನಿನ್ನೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನೇ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಮೂಲಕ ಎಂಟು ವರ್ಷಗಳ ತಮ್ಮ ಪ್ರೀತಿಗೇ ಸಮಾಧಿ ಕಟ್ಟಿದ್ದಾನೆ.ಇಷ್ಟಕ್ಕೂ ಏನೀ ದುರಂತ ಪ್ರೇಮ ಕಹಾನಿಯ ಹಿನ್ನೆಲೆ? ಈ ಸ್ಟೋರಿ ನೋಡಿ....
ಉಡುಪಿಯ ಕಕ್ಕುಂಜೆ ನಿವಾಸಿ ಸೌಮ್ಯ, ನಗರ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ಅಲೆವೂರಿನ ಸಂದೇಶ ಕುಲಾಲ್ ಮೆಡಿಕಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕಾಲೇಜು ದಿನದಿಂದ ಆರಂಭವಾದ ಇವರಿಬ್ಬರ ಪ್ರೀತಿ ಎಂಟು ವರ್ಷಗಳ ಕಾಲ ಚೆನ್ನಾಗಿಯೇ ಇತ್ತು. ಅಷ್ಟೇ ಅಲ್ಲ, ಇಬ್ಬರ ಮನೆಯಲ್ಲೂ ಪ್ರೀತಿಯ ವಿಚಾರ ಗೊತ್ತಾಗಿ ಮದುವೆಗೆ ಒಪ್ಪಿಗೆ ಕೂಡ ಇತ್ತು. ಈ ನಡುವೆ ಹುಡುಗನ ಕಡೆಯಿಂದ ಮದುವೆಗೆ ವಿಳಂಬ ಆಗತೊಡಗಿತು.
ಸೌಮ್ಯಳ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣ, ಮಗಳ ಮದುವೆ ಆದಷ್ಟು ಬೇಗ ನಡೆಯಬೇಕು ಅಸೆ ಇತ್ತು. ಆದರೆ ಸಂದೇಶ್ ಕುಲಾಲ್ ಜೊತೆಗೆ ಮದುವೆ ವಿಳಂಬ ಆಗುತ್ತಿದ್ದಂತೆ, ಸೌಮ್ಯಳಿಗೆ ಕಳೆದ ವಾರ ಬೇರೆ ಹುಡುಗನ ಜೊತೆಗೆ ವಿವಾಹ ನಿಶ್ಚಿತಾರ್ಥ ಮಾಡಲಾಯಿತು.ಈ ಹುಡುಗ ಅಷ್ಟಕ್ಕೇ ದುಡುಕಿನ ನಿರ್ಧಾರಕ್ಕೆ ಬಂದು ಬಿಟ್ಟ!
ಸೌಮ್ಯಳಿಗೆ ನಿಶ್ಚಿತಾರ್ಥ ಆದಂತೆ, ಇತ್ತ ಸಂದೇಶ್ ಕುಲಾಲ್
ಮಾನಸಿಕವಾಗಿ ಕುಗ್ಗಿ ಹೋದ.ನಿನ್ನೆ ಸಂಜೆ ಸೌಮ್ಯ ಕೆಲಸ ಮುಗಿಸಿ ಮನೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ, ಸಂತೆಕಟ್ಟೆ ಎಂಬಲ್ಲಿ ಸಂದೇಶ್ ಅಡ್ಡ ಕಟ್ಟಿ, ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳದು ಸೌಮ್ಯಳಿಗೆ ಚೂರಿಯಿಂದ 14 ಬಾರಿ ಇರಿದಿದ್ದಾನೆ.! ಅಲ್ಲದೇ ತಾನು ಕೂಡ ಅದೇ ಚೂರಿಯಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಕೊಂಡಿದ್ದಾನೆ.. ಹೀಗೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತು.., ಚಿಕಿತ್ಸೆ ಫಲಕಾರಿ ಆಗದೇ ಈಗ ಇಬ್ಬರೂ ಸಾವನ್ನಪ್ಪಿದ್ದಾರೆ..
ಇಲ್ಲಿ ಯಾರು ಸರಿ ,ಯಾರು ತಪ್ಪು ಎಂಬ ಪ್ರಶ್ನೆ ಸೆಕೆಂಡರಿ.ಆದರೆ ಎಂಟು ವರ್ಷಗಳ ಪ್ರೀತಿ ಈ ರೀತಿ ನಡು ರಸ್ತೆಯಲ್ಲಿ ಸಾವಾಗಿ, ದುರಂತ ಆಂತ್ಯ ಕಂಡಿದ್ದು ಬೇಸರದ ಸಂಗತಿಯೇ ಸರಿ.
Kshetra Samachara
31/08/2021 04:11 pm