ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯುವಕನಿಂದ ಚೂರಿ ಇರಿತ ಕೇಸ್- ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವು!

ಉಡುಪಿ: ಉಡುಪಿಯಲ್ಲಿ ಇವತ್ತು ಸಂಜೆ ಯುವತಿಗೆ ಯುವಕನೊಬ್ಬ ಚೂರಿ ಇರಿದು ತಾನೂ ಕತ್ತು ಕುಯ್ದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿಯಾಗಿದ್ದಾರೆ. ಉಡುಪಿಯ ಸಂತಕಟ್ಟೆಯಲ್ಲಿ ಸಂಜೆ ವೇಳೆ ಈ ನಡೆದ ಘಟನೆ ನಡೆದಿತ್ತು. ಸೌಮ್ಯಳಿಗೆ ಚೂರಿ ಇರಿದು, ತಾನು ಕತ್ತು ಕೊಯ್ದುಕೊಂಡ ಸಂದೇಶ್ ಕುಲಾಲ್ ಎಂಬ ಯುವಕನ ಸ್ಥಿತಿ ಇನ್ನೂ ಗಂಭೀರವಾಗಿದೆ.

ಸಂಜೆ ಸೌಮ್ಯ ಕೆಲಸ ಮುಗಿಸಿ, ಮನೆಗೆ ಹೋಗುತ್ತಿದ್ದಾಗ ಸ್ಕೂಟಿಯನ್ನು ತಡೆದು ಸಂದೇಶ್ ಈ ಕೃತ್ಯ ಎಸಗಿದ್ದ. ವಾರದ ಹಿಂದೆ ಯುವತಿಗೆ ನಿಶ್ಚಿತಾರ್ಥ ಆಗಿತ್ತು ಎಂಬುದು ಗಮನಾರ್ಹ ಸಂಗತಿ. ಇದರಿಂದ ಕೋಪಗೊಂಡ ಯುವಕ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಯುವಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

30/08/2021 10:23 pm

Cinque Terre

25.85 K

Cinque Terre

2

ಸಂಬಂಧಿತ ಸುದ್ದಿ