ಉತ್ತರ ಕನ್ನಡ: ಹೊನ್ನಾವರ ತಾಲ್ಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಣವಂತೆ ಎಂಬಲ್ಲಿ ಅಕ್ರಮವಾಗಿ ಗೋವನ್ನು ನಾಲ್ವರು ಅಪರಿಚಿತರು ಎರ್ಟಿಗಾ ಕಾರಿನಲ್ಲಿ ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಭಾನುವಾರ(ಆ.22) ನಸುಕಿನ ಜಾವ ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದಿದ್ದ ನಾಲ್ವರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ಗುಣವಂತೆ ಗ್ರಾಮದಲ್ಲಿರುವ ಮರಿ ಭಟ್ಟರ ಹೊಟೇಲ್ ಮುಂದೆ ನಿಂತುಕೊಂಡಿದ್ದ ಗೋವನ್ನು ಹಿಡಿದು, ಅದನ್ನು ಒತ್ತಾಯಪೂರ್ವಕವಾಗಿ ಅವೈಜ್ಞಾನಿಕ ರೀತಿಯಲ್ಲಿ ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
ಈ ದೃಶ್ಯ ಸಮೀಪದ ಹೋಟೆಲೊಂದರ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೋಸ್ಟ್ ಮಾಸ್ಟರ್ ಮಂಜುನಾಥ ಯಾಜಿ ಎನ್ನುವವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಗೋಕಳ್ಳರಿಗಾಗಿ ಬಲೆ ಬೀಸಿದ್ದಾರೆ...
Kshetra Samachara
24/08/2021 11:22 am