ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೇರ್ ಬ್ಯಾಂಡ್​ನೊಳಗೆ ಚಿನ್ನ ಸಾಗಾಟ- 5.58 ಲಕ್ಷ ರೂ. ಮೌಲ್ಯದ ಬಂಗಾರ ವಶ

ಮಂಗಳೂರು: ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳ ಹೇರ್ ಬ್ಯಾಂಡ್​ನೊಳಗೆ ಮುಚ್ಚಿಟ್ಟು ಚಿನ್ನ ಕಳ್ಳ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ದುಬೈನಿಂದ ಆಗಮಿಸಿರುವ ಮುರುಡೇಶ್ವರದ ಪ್ರಯಾಣಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಕಸ್ಟಮ್ಸ್ ಅಧಿಕಾರಗಳು ತಪಾಸಣೆ ನಡೆಸಿದಾಗ ಈತ ಹ್ಯಾರ್ ಬ್ಯಾಂಡ್ ನೊಳಗೆ ಬಚ್ಚಿಟ್ಟು ಚಿನ್ನ ಕಳ್ಳಸಾಗಟ ನಡೆಸುತ್ತಿರುವುದು ಪತ್ತೆಯಾಗಿದೆ.

ಈ ಹೇರ್ ಬ್ಯಾಂಡ್​ನೊಳಗೆ ತಂತಿ ರೂಪದಲ್ಲಿ 115 ಗ್ರಾಂ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ. ಈತನಿಂದ ವಶಪಡಿಸಿಕೊಂಡ ಚಿನ್ನದ ಮೌಲ್ಯ 5,58,900 ರೂ. ಎಂದು ಅಂದಾಜಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

21/08/2021 06:12 pm

Cinque Terre

12.22 K

Cinque Terre

1

ಸಂಬಂಧಿತ ಸುದ್ದಿ