ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರವಾಸಿ ಬಂಗಲೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

ಕುಂದಾಪುರ: ಯುವಕನೋರ್ವ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಮೂಡುಗಿಳಿಯಾರಿನಲ್ಲಿ ನಡೆದಿದೆ. ಉದಯ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. 15ರಂದು ಮನೆಯಿಂದ ಕೆಲಸಕ್ಕೆಂದು ಹೋದ ಉದಯ್, ಮರಳಿ ಮನೆಗೆ ಬರದೇ ನಾಪತ್ತೆ ಆಗಿದ್ದ. ನಿನ್ನೆ ಸ್ಥಳೀಯರೊರ್ವರು ಇಲ್ಲಿನ ಪ್ರವಾಸಿ ಬಂಗಲೆ ಸಮೀಪ ತೆರಳಿದಾಗ, ಕೊಳತೆ ವಾಸನೆ ಬರುತ್ತಿತ್ತು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಕೋಟ ಠಾಣಾ ಪೋಲಿಸರು ಬಾಗಿಲು ತೆರೆದು ನೋಡಿದಾಗ ಉದಯ್ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದು ಗೊತ್ತಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

20/08/2021 11:50 am

Cinque Terre

19.81 K

Cinque Terre

1

ಸಂಬಂಧಿತ ಸುದ್ದಿ