ಮಂಗಳೂರು: ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸುಶಾನ್ ಚಂದ್ರ ಎಂಬುವವರು ತನ್ನ ಬಗ್ಗೆ ವಾಟ್ಸಾಪ್ ಹಾಗೂ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ತನ್ನ ಫೋಟೋ ಜೊತೆಗೆ ಸುಳ್ಳು ಪೋಸ್ಟ್ ಕ್ರಿಯೇಟ್ ಮಾಡಿ ಹರಿಯಬಿಟ್ಟಿದ್ದಾರೆ. ಅಲ್ಲದೆ ಮನೆ-ಮಂದಿಗೆ ಬೆದರಿಕೆ ಕರೆ ಕೂಡ ಬರುತ್ತಿರುವುದಾಗಿ ನೊಂದ ಯುವಕ ವಾಟ್ಸಾಪ್ ಸ್ರ್ಕೀನ್ ಶಾರ್ಟ್ ಸಮೇತ ಬೆಳ್ತಂಗಡಿ ಠಾಣೆಗೆ ಇಂದು ದೂರು ನೀಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯುವಕ, "ಬೆಳ್ತಂಗಡಿ ನ್ಯೂಸ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ನಾನು ಇದ್ದು ಇದರಲ್ಲಿ ಹಿಂದೂ, ಮುಸ್ಲಿಂ ಹಾಗೂ ವಿವಿಧ ಪಕ್ಷದವರು ಅಲ್ಲದೆ ಹೊರದೇಶದ ಯುವಕರು ಇದ್ದಾರೆ. ಇದರಲ್ಲಿ ಒಂದು ವಾರದಿಂದ ಭಾರಿ ಗಲಾಟೆ ನಡೆಯುತ್ತಿತ್ತು. ಇದರಲ್ಲಿ ನಾನು ಕೂಡ ಚರ್ಚೆ ಮಾಡಿದ್ದೆ. ಇದರಿಂದ ಕೋಪಗೊಂಡು ಹೊರದೇಶದಿಂದ ಸುಳ್ಳು ಸುದ್ದಿಯನ್ನು ಕ್ರಿಯೆಟ್ ಮಾಡಿ ನನ್ನ ಬಗ್ಗೆ ಈ ರೀತಿ ಅಪಪ್ರಚಾರ ಮಾಡಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.
Kshetra Samachara
19/08/2021 10:18 pm