ಮಂಗಳೂರು: ವ್ಯಕ್ತಿಯೋರ್ವ ಕುಡಿತದ ಅಮಲಿನಲ್ಲಿ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ.
ಸುನಿತಾ ಕೊಲೆಯಾದ ಮಹಿಳೆ. ಮೂಡಬಿದರೆಯ ಬೆಳುವಾಯಿ ಸಮೀಪದ ಧರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಲ್ಲಿ ಈ ಘಟನೆ ನಡೆದಿದೆ. ಕೊಲೆ ಪ್ರಕರಣ ದಾಖಲಿಸಿ ಪತಿ ದಿನ್ ರಾಜ್ನನ್ನು ಮೂಡಬಿದರೆ ಪೊಲೀಸರು ಬಂಧಿಸಿದ್ದಾರೆ. ಸುನಿತಾ ಪತಿ ನಿನ್ನೆ (ಮಂಗಳವಾರ) ಕುಡಿದು ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದು, ಜಗಳ ತಾರಕಕ್ಕೇರಿ ಮಾರಕಾಸ್ತ್ರದಿಂದ ಪತ್ನಿ ಸುನಿತಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುನಿತಾ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
Kshetra Samachara
18/08/2021 11:11 pm