ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕುದುಮ ಲಚ್ಚಿಲ್ ಎಂಬಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕಿನ್ನಿಗೋಳಿ ಗುತ್ತಕಾಡು ಮುಖ್ಯ ರಸ್ತೆಯ ಸಮೀಪದ" ಜಯಂತಿ ಸದನ" ಎಂಬ ಮನೆಯ ಎದುರಿನ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಮನೆಯ ಒಳಗಿನ ಬ್ಯಾಗ್ ಕಪಾಟು ಮತ್ತು ಮತ್ತಿತರ ಕಡೆಗಳಲ್ಲಿ ಜಾಲಾಡಿದ್ದಾರೆ

ಬಳಿಕ ಕೋಣೆಯೊಳಗಿನ ಕಪಾಟಿನಿಂದ ಚಿನ್ನದ ಸರ ಉಂಗುರ, ಮತ್ತು ಕಿವಿಯೋಲೆ ಸಹಿತ ಒಟ್ಟು 21 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ

ಮನೆಯ ಯಜಮಾನ ಸದಾನಂದ ಎಂಬವರು ಅನಾರೋಗ್ಯದ ಕಾರಣ ಮುಲ್ಕಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಸಂದರ್ಭ ಪತ್ನಿ ಜಯಂತಿ ಮತ್ತು ಮಗಳಾದ ಲತಾ ಮತ್ತಿತರರು ಸದಾನಂದ ಅವರನ್ನು ನೋಡಲು ಗುರುವಾರ ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಗೆ ತೆರಳಿದ್ದು ಮೂರು ಗಂಟೆಗೆ ವಾಪಾಸ್ಸಾಗುವ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.

ಕೂಡಲೇ ಮುಲ್ಕಿ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲಿಸರು , ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದೊಂದಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ.

ಶ್ವಾನ ಮನೆಯ ಹಿಂಭಾಗದ ಮೂಲಕ ಅಣತಿ ದೂರದವರೆಗೆ ಹೋಗಿದೆ ಮುಲ್ಕಿ ಎಸ್.ಐ ವಿನಾಯಕ್ ಮತ್ತು ತಂಡ ತನಿಖೆ ನಡೆಸುತ್ತಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ತಿಂಗಳ ಹಿಂದೆಯೇ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಕಳ್ಳತನ ನಡೆದಿದ್ದು ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ ಈ ನಡುವೆ ಗುರುವಾರ ಹಾಡು ಹಗಲೇ ಕಿನ್ನಿಗೋಳಿಯಲ್ಲಿ ನಡೆದ ಮನೆ ಕಳ್ಳತನದ ಕೃತ್ಯ ಸ್ಥಳೀಯರನ್ನು ಭಯಭೀತರನ್ನಾಗಿಸಿದ್ದು ಕೂಡಲೇ ಕಳ್ಳರನ್ನು ಪತ್ತೆ ಹಚ್ಚುವಂತೆ ನಾಗರಿಕರು ಪೊಲೀಸರನ್ನು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/08/2021 09:53 pm

Cinque Terre

28.67 K

Cinque Terre

2

ಸಂಬಂಧಿತ ಸುದ್ದಿ