ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗೆ ಹಣ್ಣಿನೊಳಗೆ ಗಾಂಜಾವನ್ನಿರಿಸಿ ನೀಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಮಜೀದ್ ವಿಚಾರಣಾಧೀನ ಕೈದಿಗೆ ಗಾಂಜಾ ನೀಡಲು ಯತ್ನಿಸಿದ ಆರೋಪಿ. ಅಬ್ದುಲ್ ಮಜೀದ್ ಕಾರಾಗೃಹದಲ್ಲಿದ್ದ ರಾಜಪ್ಪ ಎಂಬಾತನಿಗೆ ಅಗತ್ಯ ವಸ್ತುಗಳನ್ನು ನೀಡಲು ಬಂದಿದ್ದ. ಈ ವಸ್ತುಗಳನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಆಗ ಎಕ್ಸ್‌ರೇ ಬ್ಯಾಗೇಜ್‌ನಲ್ಲಿ ಅನಾನಸ್ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ. ಕೂಡಲೇ ಹಣ್ಣನ್ನು ಬಿಚ್ಚಿ ನೋಡಿದಾಗ ಹಣ್ಣಿನೊಳಗೆ ಸಣ್ಣ ಪ್ಯಾಕೇಟ್ ಒಳಗಡೆ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದೆ. ತಕ್ಷಣ ಆರೋಪಿ ಅಬ್ದುಲ್ ಮಜೀದ್‌ನನ್ನು ಬರ್ಕೆ ಪೊಲೀಸರಿಗೆ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/08/2021 09:46 am