ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ಸುಂದರ ಎಂಬಾತನನ್ನು ಶುಕ್ರವಾರ ಮಧ್ಯರಾತ್ರಿ ಹತ್ಯೆ ಮಾಡಿದ ಆತನ ಅಣ್ಣ ರವಿ ಎಂಬಾತನನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಡಿಕೆ ಸಲಾಕೆಯಿಂದ ಹೊಡೆದು ತಮ್ಮನನ್ನು ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿದ್ದು, ತನ್ನ ಪತ್ನಿ ಜೊತೆ ಸಂಬಂಧ ಇದೆ ಎಂದು ಸಂಶಯಿಸಿ ಈ ಕೃತ್ಯ ಎಸಗಿರುವುದಾಗಿ ದೂರಲಾಗಿದೆ. ಈ ಕುರಿತು ಮತ್ತೋರ್ವ ಸಹೋದರ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ರಾತ್ರಿ ೧೧.೩೦ ಗಂಟೆಯ ಸಮಯಕ್ಕೆ ಹತ್ಯೆ ನಡೆದಿದೆ. ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ಸುಂದರನ ತಲೆಗೆ ಏಟು ನೀಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಮೃತಪಟ್ಟದ್ದನ್ನು ನೋಡಿ ಸಲಾಕೆಯನ್ನು ಬಿಸಾಡಿ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು, ಬಳಿಕ ರವಿಗಾಗಿ ಶೋಧ ಕಾರ್ಯ ನಡೆದಿದ್ದು, ಇದೀಗ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.
Kshetra Samachara
09/08/2021 11:12 am