ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ಸುಂದರ (30) ಎಂಬಾತನನ್ನು ಶುಕ್ರವಾರ ಮಧ್ಯರಾತ್ರಿ ಆತನ ಅಣ್ಣ ರವಿ ಎಂಬಾತ ಹತ್ಯೆ ಮಾಡಿದ ಘಟನೆ ನಡೆದಿದ್ದು, ಸದ್ಯ ಆರೋಪಿ ತಪ್ಪಿಸಿಕೊಂಡಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೈಯಕ್ತಿಕ ಕಾರಣಗಳಿಂದ ಹತ್ಯೆ ನಡೆದಿರುವುದಾಗಿ ಸಂಶಯಿಸಲಾಗಿದೆ.
ಅವಿವಾಹಿತನಾಗಿದ್ದ ಸುಂದರ ಎಂಬಾತ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದು, ಈತನ ಅಣ್ಣ ರವಿ ಮತ್ತು ಸುಂದರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಮನೆಯಲ್ಲಿ ತಾಯಿಯ ವರ್ಷಾಂತಿಕ ಇದ್ದು ರಾತ್ರಿ ಊಟ ಮಾಡಿ ಮನೆಯಲ್ಲಿರುವ ಸಮಯ ಅಣ್ಣ ರವಿ ಮತ್ತು ತಮ್ಮ ಸುಂದರ ಎಂದಿನಂತೆಯೇ ಜಗಳ ಮಾಡಿಕೊಂಡಿದ್ದು, ರಾತ್ರಿ 11.30 ಗಂಟೆಯ ಸಮಯಕ್ಕೆ ಹತ್ಯೆ ನಡೆದಿದೆ.
ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ಸುಂದರನ ತಲೆಗೆ ಏಟು ನೀಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಮೃತಪಟ್ಟದ್ದನ್ನು ನೋಡಿ ಸಲಾಕೆಯನ್ನು ಬಿಸಾಡಿ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Kshetra Samachara
07/08/2021 09:24 am