ಮಂಗಳೂರು: ಐಸಿಸ್ ಪರ ಪ್ರಚಾರ ನಡೆಸಿದ ಆರೋಪದಲ್ಲಿ ಬುಧವಾರ ಜಮ್ಮು-ಕಾಶ್ಮೀರ ಸೇರಿದಂತೆ ಕರ್ನಾಟಕದ ಐದು ಕಡೆಗಳಲ್ಲಿ ದಾಳಿ ನಡೆಸಿ, ಉಳ್ಳಾಲದ ಯುವಕ ಸೇರಿ ನಾಲ್ಕು ಮಂದಿಯನ್ನು ಎನ್ ಐಎ ಬಂಧಿಸಿದೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿಗಳನ್ನು ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ನಾಲ್ವರನ್ನು ಬಂಧಿಸಿದೆ. ಉಳ್ಳಾಲದಲ್ಲಿ ಮಾಜಿ ಶಾಸಕ ಬಿಎಂ ಇದ್ದಿನಬ್ಬ ಪುತ್ರನ ಮನೆಗೆ ದಾಳಿ ನಡೆಸಲಾಗಿತ್ತು. ಬಿಎಂ ಇದ್ದಿನಬ್ಬ ಅವರ ಪುತ್ರ ಬಿಎಂ ಬಾಷಾ ಸೇರಿದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ದಾಳಿ ನಡೆಸಿದ್ದು ಸಂಜೆ ವೇಳೆಗೆ ಭಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರೆಹ್ಮಾನ್ ಎಂಬಾತನನ್ನು ಬಂಧಿಸಿದ್ದಾರೆ.
ಇದೇ ವೇಳೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ,ಒಬೈದ್ ಹಮೀದ್,ಬಂಡಿಪೋರಾ ಜಿಲ್ಲೆಯ ಮುಜಾಮಿಲ್ ಹಸನ್ ಭಟ್,ಬೆಂಗಳೂರಿನ ಶಂಕರ್ ವೆಂಕಟೇಶ ಪೆರುಮಾಳ್ ಅಲಿಯಾಸ್ ಅಲಿ ಮೌವಿಯ ಎಂಬವರನ್ನು ಎನ್ ಐಎ ತಂಡ ಬಂಧಿಸಿದೆ.ಐಸಿಸ್‌ನ
ಪ್ರಚಾರಕ್ಕಾಗಿ ಮತ್ತು ಐಸಿಸ್ ಘಟಕಕ್ಕೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್ ಪ್ರಚಾರ ಚಾನಲ್‌ಗಳನ್ನು ನಡೆಸುತ್ತಿದ್ದರೆನ್ನಲಾದ ಕೇರಳ ನಿವಾಸಿ ಮುಹಮ್ಮದ್ ಅಮೀನ್, ಡಾ. ರಹೀಸ್ ರಶೀದ್ ಮತ್ತು ಮುಸಾಹಬ್ ಅನ್ವರ್ ಎನ್ನುವವರನ್ನು ಮಾರ್ಚ್‌ನಲ್ಲಿ ಬಂಧಿಸಿತ್ತು. ಅಮೀನ್ ಮತ್ತು ಸಂಗಡಿಗರು ಜಿಹಾದ್ ಸೇರುವಂತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಮಾಯಕ ಮಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಹಾಗೂ ತಮ್ಮ ಜಾಲವನ್ನು ಕಾಶ್ಮೀರ, ಭಾಗಶಃ ಕೇರಳ ಮತ್ತು ಕರ್ನಾಟಕದಲ್ಲಿ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಎನ್‌ಐಎ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಅಮೀನ್ ಮತ್ತು ಆತನ ಸಹಚರರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಶಂಕಿತರ ಮನೆಗಳ ಮೇಲೆ ಬುಧವಾರ ದಾಳಿಗಳನ್ನು ನಡೆಸಲಾಗಿದ್ದು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ,ಹಾರ್ಡ್ ಡಿಸ್ಕ್ ಡ್ರೈವ್‌ಗಳು, ಪೆನ್ ಡ್ರೈವ್‌ಗಳು, ಸಿಮ್ ಕಾರ್ಡ್‌ಗಳು ಸೇರಿದಂತೆ ಹಲವಾರು ಡಿಜಿಟಲ್ ಸಾಧನಗಳನ್ನು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ...
Kshetra Samachara
05/08/2021 09:06 am