ಮಂಗಳೂರು: ನಗರದ ಬಂದರು ಪರಿಸರದ ಬದ್ರಿಯಾ ಕಾಲೇಜಿನ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವಾದ ಬಗ್ಗೆ ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ 'ನವರಂಗ್ ಡಿಜಿಟಲ್ಸ್' ನ ಉದ್ಯೋಗಿಯೊಬ್ಬರು ಕಾರ್ಯ ನಿಮಿತ್ತ ತನ್ನ ಈ ದ್ವಿಚಕ್ರ ವಾಹನವನ್ನು ಜು. 26 ರಂದು ಬದ್ರಿಯಾ ಕಾಲೇಜಿನ ಸಮೀಪ ನಿಲ್ಲಿಸಿದ್ದರು. ಆದರೆ, ಅವರು ಹಿಂದಿರುಗಿ ಬಂದು ನೋಡುವಷ್ಟರಲ್ಲಿ ಸ್ಕೂಟರ್ ನ್ನು ಕಳ್ಳರು ಲಪಟಾಯಿಸಿದ್ದರು!
ಕಡುನೀಲಿ ಬಣ್ಣದ Suzuki Access (KA19 HE 3570) ಸ್ಕೂಟರ್ ಇದಾಗಿದ್ದು, ಇಬ್ಬರು ಖದೀಮರು ಅಪಹರಿಸಿ, ವೇಗವಾಗಿ ದೌಡಾಯಿಸುತ್ತಿರುವ ದೃಶ್ಯಾವಳಿ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳರು ಹಾಗೂ ಸ್ಕೂಟರ್ ನ ಕುರಿತು ಮಾಹಿತಿ ಲಭ್ಯವಾದಲ್ಲಿ +917892555875, +91 72596 81181 ಸಂಪರ್ಕಿಸಲು ಕೋರಲಾಗಿದೆ.
Kshetra Samachara
02/08/2021 09:14 pm