ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಲಿಂಗಪ್ಪಯ್ಯಕಾಡಿನ ಯುವತಿ ನಾಪತ್ತೆ ದೂರು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡಿನ ನಾಗಬನದ ಬಳಿಯ ನಿವಾಸಿ ಕಾಸಿಂಬಿಯವರ ಮಗಳು ಅಪ್ಸಾನ ( 19) ನಾಪತ್ತೆಯಾಗಿದ್ದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸಿಂಬಿಯವರು ತನ್ನ ಗಂಡ ಬಂದೇ ನವಾಝ್ ಮಕ್ಕಳಾದ ಮೆಹಬೂಬು, ಸಮೀರಾ, ಸಹನಾ, ಅಪ್ಸನಾ, ದೌಲ್ ಸಾಬ್ ರೊಂದಿಗೆ ಮೂಲ್ಕಿಯ ಲಿಂಗಪ್ಪಯ್ಯ ಕಾಡಿನಲ್ಲಿ ವಾಸವಾಗಿದ್ದು ತನ್ನ ಗಂಡ ಹಾಗೂ ಮಗ ದೌಲ್ ಸಾಬ್, ಮಗಳು ಅಪ್ಸನಾರೊಂದಿಗೆ ಲಿಂಗಪ್ಪಯ್ಯಕಾಡಿನ ನಾಗಬನದ ಹತ್ತಿರ ಶ್ರೀ ಸಾಯಿ ಕ್ಯಾಂಟೀನ್ ನಡೆಸಿಕೊಂಡಿದ್ದು ಜುಲ್ಯೆ 26 ರಂದು ಕಾಸಿಂಬಿ ಹಾಗೂ ಇತರರು ಕ್ಯಾಂಟೀನ್ ನಲ್ಲಿರುವ ಸಮಯ ಮಗಳು ಅಪ್ಸನಾ ರಾತ್ರಿ ಬಹಿರ್ದೆಸೆಗೆಂದು ಹೇಳಿ ಮನೆಗೆ ತೆರಳಿದವಳು ವಾಪಾಸ್ ಕ್ಯಾಂಟೀನ್ ಗೂ ಬಾರದೇ, ಮನೆಗೂ ಬಾರದೇ, ಇತರ ಸಂಬಂಽಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾಳೆ .

ಕಾಣೆಯಾದವರ ಚಹರೆ:-ವಯಸ್ಸು- 19 ವರ್ಷ,ಎತ್ತರ 4.5 ಅಡಿ,

ಮೈಬಣ್ಣ - ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಅರ್ಧ ತೋಳಿನ ನೀಲಿ ಬಣ್ಣದ ಹೂಗಳಿರುವ ನೈಟಿ ಹಾಗೂ ಕೆಂಪು ಬಿಳಿ ಮಿಶ್ರಿತ ಶಾಲು ಧರಿಸಿದ್ದು ಮಾಹಿತಿ ಸಿಕ್ಕಿದವರು ದೂರವಾಣಿ ಸಂಖ್ಯೆ 0824- 2290533

ಸಂಪರ್ಕಿಸುವಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

02/08/2021 11:47 am

Cinque Terre

10.5 K

Cinque Terre

0

ಸಂಬಂಧಿತ ಸುದ್ದಿ