ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ದಿ ಮರ್ಡರ್ ಆಫ್ ಫಿನಾನ್ಸಿಯರ್!

ಕುಂದಾಪುರ: ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಎರಡನೇ ಕೊಲೆ ನಡೆದಿದೆ.ಈ ಮೊದಲು ವಿಶಾಲ ಗಾಣಿಗ ಕೊಲೆ ನಡೆದಿದ್ದರೆ, ನಿನ್ನೆ ಫಿನಾನ್ಶಿಯರ್ ಒಬ್ಬರ ಮರ್ಡರ್ ಆಗಿದೆ. ಫೈನಾನ್ಸ್ ವ್ಯವಹಾರ ಮಾಡಿಕೊಂಡು ಪೈನ್ ಆಗಿದ್ದ ಗೆಳೆಯರು,ಹಣಕಾಸಿನ ವಿಷಯಕ್ಕೆ ನಿನ್ನೆ ತಡರಾತ್ರಿ ಗಲಾಟೆ ಮಾಡಿದ್ದಾರೆ. ಗಲಾಟೆ ತಾರಕಕ್ಕೆ ಏರುತ್ತಿದ್ದಂತೆ ಒಬ್ಬ ಕೊಲೆಯಾಗಿದ್ದಾನೆ!

ಈ ಘಟನೆ ನಡೆದಿದ್ದು, ಉಡುಪಿ ಜಿಲ್ಲೆಯ ಕುಂದಾಪುರದ ಕಾಳಾವರದ ನಂದಿಕೇಶ್ವರ ಕಾಂಪ್ಲೆಕ್ಸ್‌ ‌‌ನಲ್ಲಿ. ಯಡಾಡಿ ಮತ್ಯಾಡಿಯ ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನೂಪ್‌‌ ಶೆಟ್ಟಿ ಎಂಬ ಗೆಳೆಯರಿಬ್ಬರು ಪಾಲುದಾರಿಕೆಯಲ್ಲಿ ಫೈನಾನ್ಸ್‌‌ ವ್ಯವಹಾರ ನಡೆಸಿಕೊಂಡಿದ್ದರು.ವ್ಯವಹಾರ ಚೆನ್ನಾಗಿಯೇ ಇತ್ತು. ಹಣ ಹೆಚ್ಚು ಹೆಚ್ಚು ಬರುತ್ತಿದ್ದಂತೆ, ಹಣಕಾಸಿನ ವ್ಯಾಮೋಹ ಕೂಡ ಹೆಚ್ಚಾಯಿತು. ಕಾಸಿನ ವಿಚಾರಕ್ಕೆ ಸಂಬಂಧಿಸಿ ಗೆಳೆಯರ ನಡುವೆಯೇ ಆಗಾಗ ಗಲಾಟೆ ನಡೆಯುತ್ತಿತ್ತು.

ಕೊಲೆಯಾದ ಅಜೇಂದ್ರ‌ ಶೆಟ್ಡಿ ಎಂದಿನಂತೆ ನಿನ್ನೆ ರಾತ್ರಿ ಮನೆಗೆ ಬಾರದ ಕಾರಣ ಆತನಿಗೆ ಮನೆಯವರು ಫೋನ್ ಮಾಡುತ್ತಾರೆ.ಸಂಪರ್ಕ ಸಾಧ್ಯವಾಗಿಲ್ಲ.

ತಡರಾತ್ರಿ ಕಾಳಾವರಕ್ಕೆ ಬಂದು ಫೈನಾನ್ಸ್‌‌‌‌‌ ವ್ಯವಹಾರದ ಕಚೇರಿಯಲ್ಲಿ ನೋಡಿದರೆ , ಅಜೇಂದ್ರ ಶೆಟ್ಟಿ ರಕ್ತಸಿಕ್ತನಾಗಿ ಕುಳಿತಲ್ಲಿಯೇ ವಾಲಿಕೊಂಡು ಬಿದ್ದಿದ್ದ, ಆತನ ಕೆನ್ನೆಯ ಬಳಿ ಕಡಿದ ಗಾಯವಾಗಿ ರಕ್ತ ಹರಿಯುತ್ತಿತ್ತು. ಕೂಡಲೇ ಅಜೇಂದ್ರನನ್ನು ಆಸ್ವತ್ರೆಗೆ ಕರೆದುಕೊಂಡು ಹೋದರೆ ಅದಾಗಲೇ ಅಜೇಂದ್ರ ಕೊನೆಯುಸಿರೆಳೆದಿದ್ದ.

ನಿನ್ನೆ ರಾತ್ರಿ 8.30 ರತನಕ ತನಕ ಅಜೇಂದ್ರ ಹಾಗೂ ಪಾಲುದಾರ ಅನೂಪ್ ಒಟ್ಟಿಗೇ ಇದ್ದರಂತೆ.ಹಣದ ವ್ಯವಹಾರದ ವೈಮನಸ್ಸಿನಿಂದ ಅನೂಪ್ , ಅಜೇಂದ್ರನನ್ನು ಕೊಲೆ ಮಾಡಿರಬೇಕು ಎಂಬ ಸಂಶಯ ದಟ್ಟವಾಗಿದೆ.ಇದಕ್ಕೆ ಪುಷ್ಠಿ ನೀಡುವಂತೆ ಅಜೇಂದ್ರನ ಕಾರು ತೆಗೆದುಕೊಂಡು , ಅನೂಪ್ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾನೆ! ಮಾತ್ರವಲ್ಲ, ಅನೂಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ!

ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಫೋರೆನ್ಸಿಕ್ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಕೊಲೆಗಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/07/2021 04:52 pm

Cinque Terre

20.6 K

Cinque Terre

0

ಸಂಬಂಧಿತ ಸುದ್ದಿ