ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೈವಸ್ಥಾನದ ಪೂಜಾ ಸಾಮಗ್ರಿ, ಘಂಟೆ ಕಳ್ಳತನ: ನಾಲ್ವರ ಬಂಧನ

ಬ್ರಹ್ಮಾವರ: ನೆಂಚಾರು ಕರಬರಬೆಟ್ಟು ಎಂಬಲ್ಲಿ ಮನೆಯಿಂದ ಪೂಜಾ ಸಾಮಾಗ್ರಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಶೃಂಗೇರಿ ನಿವಾಸಿ ಗೋಪಾಲ (26), ಕೊಕ್ಕರ್ಣೆ ನಿವಾಸಿ ಅರುಣ (26), ಚೇರ್ಕಾಡಿ ನಿವಾಸಿ ರವಿ ಕುಮಾರ್‌, ಮತ್ತು ಸಾಸ್ತಾನ ಗುಂಡ್ಮಿ ನಿವಾಸಿ ರಜಾಕ್‌ (41) ಬಂಧಿತರು.

ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿಯ ನಿವಾಸಿ ನೀಲಕಂಠ ಕರಬ ಎಂಬವರ ಹಳೆ ಮನೆಯ ಹಿಂಬದಿ ಬಾಗಿಲು ಒಡೆದು ಮನೆಯಲ್ಲಿರುವ ಸುಮಾರು ರೂ 38200 ಮೌಲ್ಯದ ಹಿತ್ತಾಳೆಯ ಪೂಜಾ ಘಂಟೆ, ದೀಪಗಳು ಹಾಗೂ ಕೊಡಪಾನದಂತಹ ಪೂಜಾ ಸಾಮಗ್ರಿಗಳು, ಬೆಳ್ಳಿಯ ಮೂರ್ತಿಯ ಕವಚ ಹಾಗೂ 1 ಗ್ರಾಂ ಚಿನ್ನದ ಪದಕ ಹಾಗೂ ಕಬ್ಬಿಣದ ಗ್ರಹೋಪಯೋಗಿ ವಸ್ತುಗಳು ಕಳ್ಳತನವಾಗಿತ್ತು. ಅಲ್ಲದೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಮತ್ತು ತೂಕಳಕಗಳು ಕಳವು ಆಗಿದ್ದು ಈ ಬಗ್ಗೆ ಕ್ರಮವಾಗಿ ಕೋಟ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

Edited By : Nagaraj Tulugeri
Kshetra Samachara

Kshetra Samachara

31/07/2021 02:01 pm

Cinque Terre

31.27 K

Cinque Terre

0

ಸಂಬಂಧಿತ ಸುದ್ದಿ