ಬಂಟ್ವಾಳ: ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ ನಿಂದ ಡೀಸೆಲ್ ಕಳವು ಮಾಡುತ್ತಿರುವ ಜಾಲವೊಂದು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿಯ ಅರ್ಬಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದ್ದು, ಸುಮಾರು 1 ಸಾವಿರ ಲೀಟರ್ ಡೀಸೆಲ್ ಕಳವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಯೊಂದರ ಡೀಸೆಲ್ ಸಾಗಾಟ ಪೈಪ್ ಸೊರ್ನಾಡು ಖಾಸಗಿ ಜಮೀನಿನ ಮೂಲಕ ಹಾದು ಹೋಗಿದ್ದು, ಅದಕ್ಕೆ ಸ್ಥಳೀಯ ವ್ಯಕ್ತಿಯೋರ್ವ ಪೈಪ್ ಜೋಡಿಸಿ ಡೀಸೆಲ್ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಡೀಸೆಲ್ ಸಾಗಾಟ ಕಂಪೆನಿಯ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
30/07/2021 10:43 pm