ಕಾರ್ಕಳ:ಉಡುಪಿಯಲ್ಲಿ ಖಾಸಗಿ ಬಸ್ ಗಳದ್ದೇ ಕಾರುಬಾರು.ಇಲ್ಲಿ ಕೆಎಸ್ ಆರ್ ಟಿಸಿ ಬಸ್ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.ಹೀಗಾಗಿ ಖಾಸಗಿ ಬಸ್ ಸಿಬ್ಬಂದಿಯ ಆಟಾಟೋಪಗಳು ಆಗಾಗ ಸುದ್ದಿಯಾಗುತ್ತವೆ.
ಆದರೆ ಇದು ಅದಕ್ಕೆ ತದ್ವಿರುದ್ಧ ಘಟನೆ. ಉಡುಪಿ ಕಾರ್ಕಳ ನಡುವೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್
ಸಿಬ್ಬಂದಿ ಖಾಸಗಿ ಬಸ್ಸಿಗೆ ತನ್ನ ಬಸ್ಸನ್ನು ಅಡ್ಡ ನಿಲ್ಲಿಸಿ ಡ್ರೈವರ್ ಕಂಡಕ್ಟರ್ ಗೂಂಡಾಗಿರಿ ಪ್ರದರ್ಶಿಸಿರುವ ವಿಡಿಯೊ ಇಂದು ವೈರಲ್ ಆಗಿದೆ.
ಬಹುಶಃ ಟೈಮಿಂಗ್ ವಿಚಾರಕ್ಕೆ ಈ ರೀತಿ ನಡು ರಸ್ತೆಯಲ್ಲಿ ಗಲಾಟೆ ನಡೆದಿದೆ.ಖಾಸಗಿ ಬಸ್ ಗೆ ತನ್ನ ಬಸ್ ನ್ನು ಅಡ್ಡ ನಿಲ್ಲಿಸಿದ ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ,ನಿರ್ವಾಹಕನ ಜೊತೆ ಸೇರಿ ಖಾಸಗಿ ಬಸ್ ನವರಿಗೆ ಬೈದು ವಿಡಿಯೋ ಮಾಡಿದ ಘಟನೆ ಇದು.ಈ ಘಟನೆಯನ್ನು ಯಾರೋ ವಿಡಿಯೊ ಮಾಡಿದ್ದು ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಈ ರೀತಿ ಬಸ್ ಗೆ ಅಡ್ಡ ಇಟ್ಟು ಅಸಭ್ಯ ವರ್ತನೆ ತೋರುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Kshetra Samachara
30/07/2021 06:01 pm