ಮಂಗಳೂರು: ಪಾರ್ಟಿ ಮಾಡೋಣ ಎಂದು ಮನೆಗೆ ಬಂದ ಜೋಡಿಯೊಂದು ಮದ್ಯಕ್ಕೆ ಅಮಲು ಆಗುವಂತಹ ಜ್ಯೂಸ್ ಬೆರೆಸಿ ವಿವಸ್ತ್ರಗೊಳಿಸಿ ನಗ-ನಗದು ದೋಚಿದ್ದಲ್ಲದೆ, ಹನಿಟ್ರ್ಯಾಪ್ ಮಾಡಿರುವ ಆರೋಪದ ಮೇಲೆ ಯುವಕ, ಯುವತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೋಟ ಮಂಗಳೂರು ನಿವಾಸಿ ಅಝ್ವಿನ್ ಸಿ.ಎಂ(24), ನಗರದ ಬೈಕಂಪಾಡಿ, ಜೋಕಟ್ಟೆ ನಿವಾಸಿ ಸಪ್ನಾ ಹತೀಜಮ್ಮ(23) ಬಂಧಿತರು. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೋರ್ವರ ಮನೆಗೆ ಪಾರ್ಟಿ ಮಾಡುವ ಎಂದು ಅಝ್ವಿನ್ ಸಿ.ಎಂ ಮತ್ತು ಸಪ್ನಾ ಹತೀಜಮ್ಮ ಜು.19 ರಂದು ಬಂದಿದ್ದರು. ಪಾರ್ಟಿಯಲ್ಲಿ ಮದ್ಯಕ್ಕೆ ಅಮಲು ಆಗುವಂತಹ ಜ್ಯೂಸ್ ಬೆರಸಿ ನೀಡಿದ್ದಾರೆ. ಅದನ್ನು ಕುಡಿದ ಆತ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಅವರು ಎಚ್ಚರಗೊಂಡಾಗ ಪೂರ್ತಿಯಾಗಿ ವಿವಸ್ತ್ರರಾಗಿದ್ದರು. ಅಲ್ಲದೆ ಎಡಗೈನಲ್ಲಿದ್ದ ನವರತ್ನ ಖಚಿತ ಉಂಗುರ ಕಪಾಟಿನಲ್ಲಿದ್ದ 2.12 ಲಕ್ಷ ರೂ. ಕಾಣೆಯಾಗಿತ್ತು. ಆರೋಪಿಗಳೂ ಮನೆಯಲ್ಲಿ ಇರಲಿಲ್ಲ.
ಮರುದಿನ ಬೆಳಗ್ಗೆ ಅಝ್ವಿನ್ ಮನೆಗೆ ಹೋಗಿ ಪೊಲೀಸ್ ದೂರು ನೀಡುವುದಾಗಿ ಹೇಳಿದಾಗ, ತನ್ನ ಮೊಬೈಲ್ ಫೋನ್ ನಲ್ಲಿದ್ದ ಅವರ ನಗ್ನ ಫೋಟೋ, ವೀಡಿಯೋ ತೋರಿಸಿ ಹಣ ಕೇಳಿದರೆ, ಪೊಲೀಸ್ ದೂರು ನೀಡಿದರೆ ಈ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ನನ್ನ ತಂಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ತಂಗಿಯಿಂದಲೇ ದೂರು ದಾಖಲಿಸುವುದಾಗಿ ಅಝ್ವಿನ್ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
28/07/2021 04:17 pm