ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 2 ಕೋಟಿ ರೂ. ಮೌಲ್ಯದ ಅಡಿಕೆಯೊಂದಿಗೆ ಲಾರಿ ಸಹಿತ ನಾಲ್ವರು ಪರಾರಿ; ದೂರು ದಾಖಲು

ಮಂಗಳೂರು: ನಗರದಿಂದ ಗುಜರಾತ್‌ ರಾಜ್ಯದ ರಾಜ್‌ಕೋಟ್‌ಗೆ ಸಾಗಾಟ ಮಾಡುತ್ತಿದ್ದ ಸುಮಾರು 2 ಕೋಟಿ ರೂ. ಮೌಲ್ಯದ ಅಡಿಕೆಯಿರುವ ಲಾರಿ ಸಹಿತ ನಾಲ್ವರು ಪರಾರಿಯಾಗಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿ ಚಾಲಕ ಬಾವೇಶ್ ಕೆ. ಷಾ, ಆಶೀಶ್ ಯಾದವ್, ಮಹಾರಾಷ್ಟ್ರ ನಾಸಿಕ್ ಜೋಷಿ ಟ್ರಾನ್ಸ್‌ಪೊರ್ಟ್ ಮಾಲಕರುಗಳಾದ ವಿಜಯ್ ಜೋಷಿ ಹಾಗೂ ಡ್ಯಾನಿಶ್ ವಿಜಯ್ ಜೋಷಿ ಪ್ರಕರಣದ ಆರೋಪಿಗಳೆಂದು ದೂರಲಾಗಿದೆ.

ಪ್ರಕರಣ ವಿವರ: ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಸಂಸ್ಥೆಯು ಭಟ್ಕಳ ಸೇರಿದಂತೆ ಇತರೆಡೆ ಅಡಿಕೆ ಹಾಗೂ ಇತರ ಕಾಡು ಉತ್ಪನ್ನಗಳನ್ನು ಖರೀದಿಸಿ ಹೊರರಾಜ್ಯಕ್ಕೆ ಕಳುಹಿಸುತ್ತಿರುವ ವ್ಯವಹಾರ ನಡೆಸುತ್ತಿತ್ತು. ಅದರಂತೆ ಜು.19ರಂದು ಬೋಳೂರಿನ ಜಯಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಬುಕಿಂಗ್ ಆಫೀಸ್‌ನಿಂದ ಲಾರಿಯನ್ನು ಗೊತ್ತುಪಡಿಸಿ ಗುಜರಾತ್ ನ ರಾಜ್‌ಕೋಟ್‌ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಬ್ರ್ಯಾಂಚ್ ಆಫೀಸಿಗೆ 291ಬ್ಯಾಗ್ ಅಡಿಕೆಯನ್ನು ಕಳುಹಿಸಿ ಕೊಡಲಾಗಿತ್ತು.

ಮತ್ತೆ ಜು.20ರಂದು ಇನ್ನೊಂದು ಲಾರಿಯಲ್ಲಿ 301 ಬ್ಯಾಗ್ ಅಡಿಕೆಯನ್ನು ಕಳುಹಿಸಲಾಗಿತ್ತು. ಈ ಎರಡೂ ಲಾರಿಗಳು ಜು.24ರಂದು ಗುಜರಾತ್ ರಾಜ್‌ಕೋಟ್ ನ ಬ್ರಾಂಚ್‌ಗೆ ತಲುಪಬೇಕಾಗಿತ್ತು. ಆದರೆ ಅಲ್ಲಿಗೆ ತಲುಪದೆ ಲಾರಿ ಸಹಿತ ಈ ನಾಲ್ವರೂ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

28/07/2021 11:37 am

Cinque Terre

27.17 K

Cinque Terre

0

ಸಂಬಂಧಿತ ಸುದ್ದಿ