ಮುಲ್ಕಿ: ಕೆಎಸ್ ರಾವ್ ನಗರ ಮಸೀದಿ ಬಳಿ ಪೊಲೀಸ್ ಮತ್ತು ಆರೋಪಿ ನಡುವೆ ಘರ್ಷಣೆ, ಹಲ್ಲೆ

ಮುಲ್ಕಿ: ಮುಲ್ಕಿ ಸಮೀಪದ ಕೆಎಸ್ ರಾವ್ ನಗರದ ಮಸೀದಿ ಬಳಿ ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಮನೆಗೆ ಬಂದಾಗ ಮನೆಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನೂಕಾಟ ತಳ್ಳಾಟ ನಡೆದಿದ್ದು ಹಲ್ಲೆಯಿಂದ ಆರೋಪಿ, ಪೊಲೀಸರು ಹಾಗೂ ಮನೆಯವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಲ್ಕಿ ಪೊಲೀ ಸರಿಗೆ ಎರಡು ಪ್ರಕರಣದಲ್ಲಿ ಬೇಕಾಗಿದ್ದ ಕೆಎಸ್ ರಾವ್ ನಗರ ನಿವಾಸಿ ಅನ್ಸಾರ್(20) ಎಂಬಾತನ ಮಾಹಿತಿ ಪಡೆದು ನೋಟಿಸ್ ಜಾರಿ ಮಾಡಲು ಮುಲ್ಕಿ ಪೊಲೀಸರು ಕೆಎಸ್ ರಾವ್ ನಗರದ ಮಸೀದಿ ಬಳಿಯ ಆರೋಪಿಯ ಸಂಬಂಧಿಕರ ಮನೆಗೆ ಬರುತ್ತಿದ್ದಂತೆ ಆರೋಪಿಯ ಸಂಬಂಧಿಕರ ಮನೆಯವರು ಬಾಗಿಲುಗಳನ್ನು ಮುಚ್ಚಿ ಒಳಗಡೆ ಕುಳಿತುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮುಲ್ಕಿ ಪೊಲೀಸರು ಅನೇಕ ಎಚ್ಚರಿಕೆಗಳನ್ನು ನೀಡಿದರೂ ಮನೆಯವರು ಜಗ್ಗದ ಕಾರಣ ಮನೆಯ ಬಾಗಿಲು ಒಡೆದು ಒಳಗೆ ನುಗ್ಗಿದಾಗ ಮನೆಯವರಿಗೂ ಹಾಗೂ ಮುಲ್ಕಿ ಪೊಲೀಸರಿಗೂ ನೂಕಾಟ ತಳ್ಳಾಟ ನಡೆದಿದೆ. ಈ ನಡುವೆ ಆರೋಪಿ ಕತ್ತಿಯಿಂದ ಕರ್ತವ್ಯನಿರತರಾಗಿದ್ದ ಮುಲ್ಕಿ ಎಸ್ಐ ಅಶೋಕ ಎಂಬವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಅಶೋಕ್ ದೂರಿದ್ದು ಗಂಭೀರ ಗಾಯಗೊಂಡ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯ ಒಳಗೆ ಆರೋಪಿಗಳಾದ ಅನ್ಸಾರ್, ಸಾಧಿಕ್, ಮತ್ತಿಬ್ಬರು ಮಹಿಳೆಯರು ಸೇರಿ ಅಶೋಕ್ ರವರ ಕುತ್ತಿಗೆ ಹಿಡಿದು ಕತ್ತಿಯಿಂದ ಕೈಗೆ ಹಲ್ಲೆ ನಡೆಸಿದ್ದು ಅವಾಚ್ಯ ಶಬ್ದಗಳಿಂದ ಮುಲ್ಕಿ ಎಸ್ಐ ಹಾಗೂ ಇನ್ಸ್ಪೆಕ್ಟರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ಎಎಸ್ಐ ಅಶೋಕ್ ಮುಲ್ಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಆದರೆ ಮನೆಯಲ್ಲಿದ್ದ ಮಹಿಳೆ ಆರೋಪಿ ಅನ್ಸಾರ್ ದೊಡ್ಡಮ್ಮ ಮುಮ್ತಾಜ್(47) ಮುಲ್ಕಿ ಎಎಸ್ಐ ಅಶೋಕ್ ಆರೋಪವನ್ನು ನಿರಾಕರಿಸಿದ್ದು ತಮ್ಮ ಮೇಲೆ ಮುಲ್ಕಿ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಏಕಾಏಕಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ತಮ್ಮ ಬಳಿ ಅನ್ಸಾರ್ ಎಲ್ಲಿ? ಎಂದು ಕೇಳಿದ್ದು ತಮ್ಮನ್ನು ಹಾಗೂ ಸೊಸೆ ತಸ್ಮಿಯ (20) ಎಂಬವರನ್ನು ದೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಈ ನಡುವೆ ಮನೆಯೊಳಗಿದ್ದ ಆರೋಪಿ ಅನ್ಸಾರ್ ತಮ್ಮ ಕೈಗೆ ತಾನೇ ಬ್ಲೇಡಿನಲ್ಲಿ ಇರಿದುಕೊಂಡು ನನ್ನ ಮೇಲಿನ ಪ್ರಕರಣಗಳು ಮುಗಿದಿದ್ದರೂ ಯಾಕೆ ನನ್ನನ್ನು ಸತಾಯಿಸುತ್ತಿದ್ದೀರಿ? ಎಂದು ಆಕ್ರೋಶಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಈ ನಡುವೆ ಮನೆಯಲ್ಲಿ ನೂಕಾಟ ತಳ್ಳಾಟ ನಡೆದಿದ್ದು ಗಂಭೀರ ಗಾಯಗೊಂಡ ಅನ್ಸಾರ್ ಕೈಯಲ್ಲಿ ನೆತ್ತರಿನ ಓಕುಳಿಯನ್ನೇ ಹರಿದಿದ್ದರೂ ಪೊಲೀಸರು ಅಮಾನವಿಯತೆಯಿಂದ ವರ್ತಿಸಿ ಆತನನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಮುಮ್ತಾಜ್ ದೂರಿದ್ದಾರೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಅನ್ಸಾರ್ ನನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಅನ್ಸಾರ್ ತಂದೆ ಸಾಧಿಕ್, ದೊಡ್ಡಮ್ಮ ಮುಮ್ತಾಜ್ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಪ-ಪ್ರತ್ಯಾರೋಪಗಳ ಬಗ್ಗೆ ಮುಲ್ಕಿ ಠಾಣೆಗೆ ದೂರು ನೀಡಲಾಗಿದೆ. ಪಣಂಬೂರು ಎಸಿಪಿ ಮಹೇಶ್ ಕುಮಾರ್, ಇನ್ಸ್ಪೆಕ್ಟರ್ ಅಜ್ಮತ್ ಆಲಿ, ಸುರತ್ಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

Kshetra Samachara

Kshetra Samachara

10 days ago

Cinque Terre

13.85 K

Cinque Terre

4

 • mangesha
  mangesha

  Khair Wahab, aropi ninna tangi ya Amma na.??.... culprits ..ge yake defend madti

 • mangesha
  mangesha

  kanunu police virudda yaru hogangilla....kanunu ellrigu onde.. ivrenu Melinda ilidu bandavra..

 • Khair Wahab
  Khair Wahab

  mangesha, aropi Ninna tangi ya a ammanige samoga maddiddewa?

 • mangesha
  mangesha

  aropigalige Mattu avra kutumbdavrige jailge atti... Katina shikse kodi