ಮಂಗಳೂರು: ಸುರತ್ಕಲ್ ಬಳಿಯ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಈಜಾಡಲು ನೀರಿಗಿಳಿದಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದು, ಆತನ ತಂದೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತ ಬಾಲಕನನ್ನು ಶಿವಮೊಗ್ಗ ನಿವಾಸಿ ಮುಬಾರಕ್ (15) ಎಂದು ಗುರುತಿಸಲಾಗಿದೆ. ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರತೀರ ಪ್ರದೇಶದಲ್ಲಿ ಡ್ರೆಜ್ಜರ್ ಹಡಗೊಂದು ಲಂಗರು ಹಾಕಿದ ಸ್ಥಳದ ಸಮೀಪ ಸಮುದ್ರದಲ್ಲಿ ಇಂದು ಮಧ್ಯಾಹ್ನ ಬಾಲಕ ಹಾಗೂ ಆತನ ತಂದೆ ಈಜಾಡಲು ತೆರಳಿದ್ದರು.
ಈ ಸಂದರ್ಭ ಬಾಲಕನ ಮೇಲೆ ಕಡಲ ಅಲೆ ಜೋರಾಗಿ ಅಪ್ಪಳಿಸಿ ನೀರಿನಲ್ಲಿ ಏಕಾಏಕಿ ಮುಳುಗಿದ್ದಾನೆ. ಜತೆಗಿದ್ದ ಈತನ ತಂದೆಯನ್ನು ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಆದರೆ, ಬಾಲಕನನ್ನೂ ಕಾಪಾಡಲು ಪ್ರಯತ್ನಿಸಿದರಾದರೂ ಅದಾಗಲೇ ಆತ ಕೊನೆಯುಸಿರೆಳೆದಿದ್ದು, ಮೃತದೇಹವಷ್ಟೇ ದೊರಕಿತು.
ಸ್ಥಳಕ್ಕೆ ಸುರತ್ಕಲ್ ಠಾಣಾಧಿಕಾರಿ ಚಂದ್ರಪ್ಪ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ಡ್ರೆಜ್ಜರ್ ಬಳಿ ಈಜಾಡಲು ತೆರಳಿದ್ದ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದರು.
Kshetra Samachara
28/02/2021 08:19 pm