ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುಡಿತದ ಚಟ; ಯುವಕ ಆತ್ಮಹತ್ಯೆಗೆ ಶರಣು

ಉಡುಪಿ: ಯುವಕನೋರ್ವ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ 76 ಬಡಗುಬೆಟ್ಟು- ಕಸ್ತುರ್ಬಾನಗರದಲ್ಲಿ ನಡೆದಿದೆ.

'ದೇವಿ ನಿಲಯ' ನಿವಾಸಿ ಬೊಗ್ರ ಎಂಬವರ ಪುತ್ರ ಸುರೇಶ್ (36) ಮೃತಪಟ್ಟ ಯುವಕ.

ಈ ಯುವಕನಿಗೆ ವಿಪರೀತ ಕುಡಿತದ ಚಟ ಇದ್ದುದೇ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿ, ಇಲಾಖೆಗೆ ಸಹಕರಿಸಿದರು.

Edited By : Nagesh Gaonkar
Kshetra Samachara

Kshetra Samachara

28/02/2021 11:07 am

Cinque Terre

21.78 K

Cinque Terre

0

ಸಂಬಂಧಿತ ಸುದ್ದಿ