ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದಡ್ಡಲ್ ಕಾಡ್ ಶ್ರೀ ಬಬ್ಬುಸ್ವಾಮಿ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ ಪತ್ತೆ

ಮಂಗಳೂರು: ನಗರದ ಉರ್ವ ಸಮೀಪದ ದಡ್ಡಲ್ ಕಾಡ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಹಾಗೂ ಕಾಂಡೋಮ್ ಪತ್ತೆಯಾಗಿದೆ.

ಶ್ರೀ ಬಬ್ಬುಸ್ವಾಮಿಯ ಕಾಣಿಕೆ ಡಬ್ಬಿಯಿಂದ ಹುಂಡಿ ಹಣವನ್ನು ಕಳವು ಮಾಡಿದ್ದು, ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ್ದಾರೆ. ಅಲ್ಲದೆ, ಹುಂಡಿಗೆ ಏನೇನೋ ವಿಚಿತ್ರ, ಅಸ್ಪಷ್ಟ ರೀತಿಯಲ್ಲಿ ಬರೆದಿರುವ ಚೀಟಿ ಒಂದನ್ನು ಹಾಕಿದ್ದಾರೆ. ವಿಗ್ರಹಾರಾಧನೆ, ದೈವಿಕ ಶಕ್ತಿಯನ್ನು ನಿಂದಿಸಿ ಬರೆಯಲಾಗಿದೆ. ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ.

ತಿಂಗಳ ಹಿಂದೆ ಕೊಟ್ಟಾರದ ಶ್ರೀ ಬಬ್ಬುಸ್ವಾಮಿ ಮತ್ತು ಅತ್ತಾವರದ ಶ್ರೀ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನ ಮಾಡಲಾಗಿತ್ತು. ಅದರಲ್ಲಿ ಬಿಜೆಪಿ ನಾಯಕರು ಮತ್ತು ಏಸುವಿನ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ ಭಿತ್ತಿಪತ್ರವೂ ಪತ್ತೆಯಾಗಿತ್ತು. ಬಳಿಕ ಉಳ್ಳಾಲ ವ್ಯಾಪ್ತಿಯಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇದೇ ರೀತಿ ಕೃತ್ಯ ನಡೆದಿತ್ತು. ಪತ್ತೆಯಾದ ಕರಪತ್ರಗಳ ಬರವಣಿಗೆ ಒಂದೇ ರೀತಿ ಕಂಡುಬಂದಿದೆ. ಸ್ಥಳಕ್ಕೆ ಉರ್ವ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

25/02/2021 06:38 pm

Cinque Terre

43.3 K

Cinque Terre

3

ಸಂಬಂಧಿತ ಸುದ್ದಿ