ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆಂಚನಕೆರೆ ಬಳಿ ಹೈನುಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಸಮೀಪದ ಕೆಂಚನಕೆರೆ ಎಂಬಲ್ಲಿ ಹೈನುಗಾರರೊಬ್ಬರು ನೇಣು ಬಿಗಿದುಕೊಂಡು ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಸ್ಥಳೀಯ ನಿವಾಸಿ ಭಾಸ್ಕರ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಭಾಸ್ಕರ್ ಶೆಟ್ಟಿಯವರು ಹೈನುಗಾರಿಕೆ ವೃತ್ತಿ ನಡೆಸುತ್ತಿದ್ದು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಭಾಸ್ಕರ ಶೆಟ್ಟಿ ಮಾತ್ರ ನೆಲೆಸಿದ್ದು, ಪತ್ನಿ ಸ್ಥಳೀಯ ಹಾಲಿನ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಪತ್ನಿ ಹಾಲಿನ ಸೊಸೈಟಿಗೆ ಕೆಲಸಕ್ಕೆಂದು ತೆರಳಿರುವ ವೇಳೆ ಭಾಸ್ಕರ ಶೆಟ್ಟಿ ತಮ್ಮ ಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪತಿ ನಾಪತ್ತೆ ಆಗಿರುವುದನ್ನು ಕಂಡು ಪತ್ನಿ ಮಾಧುರಿಯವರು ಗಾಬರಿಯಾಗಿ ತಮ್ಮ ತೋಟದಲ್ಲಿ ಎಲ್ಲ ಕಡೆ ಹುಡುಕಾಟ ನಡೆಸಿ ಕೊನೆಗೆ ಮನೆಯಲ್ಲಿ ಪರಿಶೀಲಿಸಿದಾಗ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯ ಬಗ್ಗೆ ಸ್ಥಳೀಯರಲ್ಲಿ ಸಂಶಯ ವ್ಯಕ್ತವಾಗಿದ್ದು, ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮೃತರು ಮದ್ಯವ್ಯಸನಿಯಾಗಿದ್ದು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕಿಸಲಾಗಿದೆ.

Edited By : Manjunath H D
Kshetra Samachara

Kshetra Samachara

10/02/2021 10:00 am

Cinque Terre

32.28 K

Cinque Terre

0

ಸಂಬಂಧಿತ ಸುದ್ದಿ