ಮಂಗಳೂರು: ಮಾಜಿ ಪ್ರಿಯಕರನೊಬ್ಬ ಯುವತಿಯ ಮೇಲೆ ದಾಳಿ ಮಾಡಿದ ಘಟನೆ ಮಂಗಳೂರಿನ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದಿದೆ.
ಚೂರಿ ಇಟ್ಟುಕೊಂಡು ಗುಂಪಿನ ಜೊತೆ ಬಂದು ಕೆಲ ಯುವಕ-ಯುವತಿಯರ ಜೊತೆ ಹೊಟೇಲ್ ನಲ್ಲಿದ್ದ ಯುವತಿ ಮೇಲೆ ಮಾಜಿ ಪ್ರಿಯಕರ ತ್ರಿಶೂಲ್ ಎಂಬಾತನ ತಂಡ ಅಟ್ಯಾಕ್ ಮಾಡಿದೆ.
ಈ ವೇಳೆ ಮಾಜಿ ಪ್ರೇಯಸಿ ಜೊತೆ ಇದ್ದ ಪ್ರತೀಕ್ಷ್ ಎಂಬಾತನಿಗೆ ನಾಲ್ಕು ಕಡೆ ಚೂರಿಯಿಂದ ಇರಿಯಲಾಗಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/02/2021 01:03 pm