ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸ್ಥಳೀಯನ ಜೊತೆ ಸೇರಿ ಬೆಂಗಳೂರು ಮೂಲದ ಯುವಕರಿಂದ ದುಷ್ಕೃತ್ಯಕ್ಕೆ ಯತ್ನ

ಕುಂದಾಪುರ: ಇಬ್ಬರು ಅಪರಿಚಿತ ಯುವಕರು ಸ್ಥಳೀಯನೊಬ್ಬನ ಜೊತೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದಲ್ಲದೇ ಗುಡ್ಡಟ್ಟು ಸಮೀಪದ ಮನೆಯೊಳಗೆ ನುಗ್ಗಿ ಚಾಕು ತೋರಿಸಿ ದರೋಡೆಗೆ ಯತ್ನಿಸಿದ್ದಲ್ಲದೇ ಹೊರಗಡೆಯಿದ್ದ ನಾಯಿಗೆ ಚೂರಿ ಹಾಕಿ ಪರಾರಿಯಾದವರನ್ನು ಸ್ಥಳೀಯರ ಸಮಯಪ್ರಜ್ಙೆ ಮತ್ತು ಸಾಹಸದಿಂದ ಪೊಲೀಸರು ವಶಕ್ಕೆ ಪಡೆದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಟ್ಟು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ. ಬಂಧಿತರನ್ನು ಸುರೇಶ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವಾತನನ್ನು ನಂದೀಶ್ ಯಾನೆ ವಿಶ್ವ ಎಂದು ಗುರುತಿಸಲಾಗಿದೆ.

ಮೂವರು ಆರೋಪಿಗಳು ಬೈಕೊಂದರಲ್ಲಿ ಗುಡ್ಡಟ್ಟುವಿನ ಚಂದ್ರ ಕುಲಾಲರ ಮನೆಗೆ ಬಂದು ಅವರ ಹೆಂಡತಿಯ ಹತ್ತಿರ ಚಂದ್ರ ಕುಲಾಲರು ಇದ್ದಾರೆಯೇ ಎಂದು ಕೇಳಿದ್ದಾರೆ. ಅವರು ಇಲ್ಲ ಎಂದಾಗ ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಅವರ ಪತ್ನಿಯ ಹತ್ತಿರಾನೇ ಫೋನ್ ಮಾಡಿ ವಿಚಾರಿಸಿದಾರೆ. ಬಳಿಕ ನೀರು ಬೇಕು ಎಂದು ಕೇಳಿದ್ದು, ನೀರು ತರಲು ಒಳಗೆ ಹೋದಾಗ ಆರೋಪಿಗಳು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇದರಿಂದ ಹೆದರಿದ ಚಂದ್ರ ಕುಲಾಲರ ಪತ್ನಿ ಹಿಂಬದಿ ಬಾಗಿಲಿನಿಂದ ಹೊರಗೆ ಓಡಿದ್ದಾರೆ. ತಕ್ಷಣ ಆರೋಪಿಗಿಳು ಎದುರು ಬಾಗಿಲಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ನಾಯಿ ಬೊಗಳಿತ್ತು ಎನ್ನಲಾಗಿದೆ. ಅಲ್ಲಿಯೇ ಆರೋಪಿಯೊಬ್ಬ ನಾಯಿಗೆ ಚೂರಿ ಹಾಕಿ ಪಲಾಯನಗೈದಿದ್ದಾರೆ ಎಂದು ಚಂದ್ರ ಕುಲಾಲರ ಪತ್ನಿ ತಿಳಿಸಿದ್ದಾರೆ. ಆರೋಪಿತರಲ್ಲಿ ಒಬ್ಬ ಸ್ಥಳೀಯನಾಗಿದ್ದು, ಉಳಿದಿಬ್ಬರು ಬೆಂಗಳೂರಿನವರು ಎನ್ನಲಾಗಿದೆ.

ಅಪರಿಚಿತರು ಪಲಾಯನಗೈಯುತ್ತಿದ್ದಂತೆ ಸ್ಥಳೀಯರು ಆಟೋದಲ್ಲಿ ಬೆನ್ನಟ್ಟಿ ಜಪ್ತಿ ಸಮೀಪ ಅಡ್ಡಗಟ್ಟಿದ್ದಾರೆ. ಮೂವರ ಪೈಕಿ ನಂದೀಶ ಎಂಬಾತ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಳಸಿದ ಬೈಕ್ ಮಂಗಳೂರಿನ ಉರ್ವಾ ಸ್ಟೋರಿನಲ್ಲಿ ಕಳುವಾಗಿರುವ ಬೈಕ್ ಎಂದು ತಿಳಿದು ಬಂದಿದೆ. ಮಕ್ಕಳ ಅಪಹರಣ ಕಾರ್ಯದಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎಂಬ ವದಂತಿಗಳಿದ್ದರೂ ಪೊಲೀಸರು ವದಂತಿಗಳನ್ನು ನಿರಾಕರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/01/2021 09:45 am

Cinque Terre

21.69 K

Cinque Terre

2

ಸಂಬಂಧಿತ ಸುದ್ದಿ