ಮಂಗಳೂರು : ಕಳೆದ ಡಿಸೆಂಬರ್ ಗೆ ಒಂದು ವರ್ಷ ಗತಿಸಿರುವ ಸಿಎಎ, ಎನ್.ಆರ್.ಸಿ ಪ್ರತಿಭಟನೆ ವೇಳೆ ನಡೆದಿದ್ದ ಲಾಠಿಚಾರ್ಜ್, ಕಲ್ಲುತೂರಾಟ ಮತ್ತು ಗೋಲಿಬಾರ್ ಘಟನೆಯ ಪ್ರತೀಕಾದ ದಾಹ ಇನ್ನೂ ತೀರಿಲ್ಲ.
ಹೌದು ಈ ಗಲಭೆಯಲ್ಲಿ ನಡೆದ ಗೋಲಿಬಾರ್ ಗೆ ಇಬ್ಬರು ಬಲಿಯಾಗಿದ್ದರು. ಈ ಯುವಕರ ಸಾವಿಗೆ ಪ್ರತೀಕಾರವನ್ನು ಒಂದು ವರ್ಷದ ಒಳಗೆ ತೀರಿಸಬೇಕು ಎಂದು ನಟೋರಿಯಸ್ ತಂಡವೊಂದು ಕಡಲತಡಿಯಲ್ಲಿ ಹುಟ್ಟಿಕೊಂಡಿದೆ.
ಆ ತಂಡದ ಹೆಸರೇ 'ಮಾಯಾ ಗ್ಯಾಂಗ್'. ಈ ಗ್ಯಾಂಗ್ ನಲ್ಲಿ ಸಾಕಷ್ಟು ಜನ ಯುವಕರು, ಅಪ್ರಾಪ್ತರು ಇದ್ದರು. 2020 ರ ಡಿಸೆಂಬರ್ 19 ರ ಒಳಗೆ ಸಿಕ್ಕ ಸಿಕ್ಕ ಪೊಲೀಸರನ್ನು ಗುರಿಯಾಗಿಸಿ ದಾಳಿ ಮಾಡುವುದು ಈ ಗ್ಯಾಂಗ್ ನ ಉದ್ದೇಶವಾಗಿದೆ. ಇದಕ್ಕಾಗಿ ಹಲವಾರು ದಿನಗಳಿಂದ ಈ ತಂಡ ಸಾಕಷ್ಟು ತಯಾರಿ ನಡೆಸಿದೆ. ಅದರಂತೆ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಏಳೆಂಟು ಕಡೆ ಸಿಕ್ಕ ಸಿಕ್ಕ ಪೊಲೀಸರನ್ನು, ಅದರಲ್ಲಿಯೂ ಒಂಟಿಯಾಗಿ ಸಿಕ್ಕ ಪೊಲೀಸರ ಮೇಲೆ ದಾಳಿ ಮಾಡುವುದರ ಜೊತೆ ಅವರನ್ನು ಕೊಲೆ ಮಾಡುವುದು ಇವರ ಉದ್ದೇಶವಾಗಿತ್ತು. ಆದರೆ, ಡಿಸೆಂಬರ್ 19 ರಂದು ಗೋಲಿಬಾರ್ ನಡೆದ ವರ್ಷವಾದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡರು.
ಇದನ್ನು ಅರಿತ ಈ ಗ್ಯಾಂಗ್ ಇದಕ್ಕಾಗಿ ಎರಡ್ಮೂರು ದಿನಗಳ ಮೊದಲೇ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಸಿದ್ಧವಾದರು. ಅದರಂತೆ ಮಂಗಳೂರಿನ ನ್ಯೂಚಿತ್ರ ಚಿತ್ರಮಂದಿರ ಸರ್ಕಲ್ ಬಳಿ ಕರ್ತವ್ಯ ನಿರತರಾಗಿದ್ದ ಉತ್ತರ ಪೊಲೀಸ್ ಠಾಣೆ ಸಿಬ್ಬಂದಿ ಗಣೇಶ್ ಕಾಮತ್ ಅವನರನ್ನು ಸ್ಕೂಟಿಯಲ್ಲಿ ಬಂದಿಬ್ಬರು ಇರಿದು, ಪರಾರಿಯಾದರು. ಬಳಿಕ ಎರಡು ತಂಡ ಮಂಗಳೂರಿನ ತಣ್ಣೀರುಬಾವಿ ಮತ್ತು ಪಣಂಬೂರು ಬಳಿ ಕರ್ತವ್ಯನಿರತ ಪೊಲೀಸರ ರೈಫಲ್ ಕಸಿದುಕೊಂಡು ದಾಳಿ ನಡೆಸಿದರು.
ಈ ಮೂಲಕ ತಮ್ಮ 'ಮಾಯಾ ಗ್ಯಾಂಗ್' ನ ಕೆಲಸ ಸಾಕಾರವಾಗುವಂತೆ ನೋಡಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಮತ್ತೆ ಇದೇ ರೀತಿ ದಷ್ಕೃತ್ಯ ರೂಪಿಸುತ್ತಿದ್ದರು.
ಈ ಹಿನ್ನಲೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹಳೆ ಪ್ರಕರಣಗಳನ್ನು ರೀ ಓಪನ್ ಮಾಡಿ ಈ 'ಮಾಯಾ ಗ್ಯಾಂಗ್' ನ ಜಾಲವನ್ನು ಭೇದಿಸಿದ್ದಾರೆ.
ಪೊಲೀಸರ ಮೇಲೆ ದಾಳಿ ಮಾಡಿದ ಈ ತಂಡದ 6 ಜನರನ್ನು ಬಂಧಿಸಿದ್ದಾರೆ. ಕುದ್ರೋಳಿ ನಿವಾಸಿ ಅನೀಶ್ ಅಶ್ರಪ್, ಅಬ್ದುಲ್ ಖಾದರ್ ಫಹಾದ್, ಬಜಪೆ ನಿವಾಸಿ ಶೇಖ್ ಮಹಮ್ಮದ್ ಹ್ಯಾರೀಸ್, ತಣ್ಣೀರು ಬಾವಿ ನಿವಾಸಿ ಮಹಮ್ಮದ್ ಖಾಯೀಸ್, ಕುದ್ರೋಳಿ ನಿವಾಸಿ ಚೋಟು ರಾಹಿಲ್, ಬಿ.ಸಿ.ರೋಡ್ ನಿವಾಸಿ ಮಹಮ್ಮದ್ ನವಾಜ್ ಬಂಧಿತರು.
ಇನ್ನು ಈ 'ಮಾಯಾ ಗ್ಯಾಂಗ್' ತಂಡ ದಾಳಿ ಮಾಡಲು ಅಪ್ರಾಪ್ತರನ್ನು ಬಳಿಸಿಕೊಳ್ಳುವ ಮೂಲಕ ಹೊಸ ಯೋಜನೆ ರೂಪಿಸಿರುವುದು ಬಯಲಾಗಿದೆ. ಆರೋಪಿಗಳು ಅಪ್ರಾಪ್ತರಾದರೆ ಅವರಿಗೆ ಬೇಗ ಜಾಮೀನು ಸಿಗುತ್ತದೆ ಮತ್ತು ಶಿಕ್ಷೆ ಕಡಿಮೆಯಾಗುತ್ತದೆ ಎನ್ನುವುದು ಇವರ ಉದ್ದೇಶ. ಇನ್ನು ಇವರೆಲ್ಲಾ ನಿಟ್ರಾವಿಟ್ ಎಂಬಾ ಮಾತ್ರೆಯನ್ನು ಡ್ರಗ್ಸ್ ನ ಹಾಗೆ ಸೇವಿಸಿ ಕೃತ್ಯ ಎಸಗುತ್ತಿದ್ದರು.
Kshetra Samachara
19/01/2021 10:17 pm