ಮಂಗಳೂರು : ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಅಪರಿಚಿತರು ಪರಾರಿಯಾದ ಘಟನೆ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಆನೆಕಾರ್ ಎಂಬಲ್ಲಿ ನಡೆದಿದೆ.
ಇನ್ನು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಕ್ಕುಜಡ್ಕ ಶಾಲೆಗೆ ಹೋಗುತ್ತಿರುವಾಗ ಆನೆಕಾರ್ ಸಮೀಪ ಬೈಕ್ ನಲ್ಲಿ ಬಂದ ವ್ಯಕ್ತಿಗಳು ರಾಸಾಯನಿಕವೊಂದನ್ನು ಬಾಲಕಿಗೆ ಸ್ಪ್ರೇ ಮಾಡಿ ಆಕೆಯ ಪ್ರಜ್ಞೆ ತಪ್ಪಿಸಿ ಪರಾರಿಯಾಗಿದ್ದಾರೆ.
ಸದ್ಯ ಸುಳ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Kshetra Samachara
05/01/2021 02:59 pm