ಸುಳ್ಯ: ತನ್ನ ಚಿಕ್ಕಪ್ಪನ ಅಪ್ರಾಪ್ತ ಮಗಳನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಯೋರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಲ್ಮಡ್ಕ ಗ್ರಾಮದ ವಾರ್ಡ್–1ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಆರೋಪಿ ತನ್ನ ಚಿಕ್ಕಪ್ಪನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿಯನ್ನು ಚುನಾವಣೆಯ ಮುನ್ನಾ ದಿನವಾದ ಶನಿವಾರವೇ ಬಂಧಿಸಿದ್ದಾರೆ.
Kshetra Samachara
27/12/2020 12:46 pm