ಕರಾವಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಬೆಳವಣಿಗೆ ಉಡುಪಿ ಹಾಗೂ ಮಂಗಳೂರು ಜನರನ್ನು ಆತಂಕಕ್ಕೆ ದೂಡಿವೆ. ಉಡುಪಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಉದ್ಯಮಿಯೊಬ್ಬರ ಪುತ್ರ ಅನುಭವ್ ಅಪಹರಣ, ಗ್ಯಾಂಗ್ ವಾರ್, ಸರಣಿ ಕೊಲೆಗಳು ಭಯದ ವಾತಾವರಣ ಉಂಟು ಮಾಡಿವೆ.
ಬಾಲಕನ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ನೇತೃತ್ವದಲ್ಲಿ ಜಿಲ್ಲೆಸಸಸಸಸಯ 4-5 ಠಾಣೆಯ ಠಾಣಾಕಾರಿಗಳ ಜತೆ ಡಿವೈಎಸ್‌ಪಿ, ಎಸಿಪಿ, ಡಿಸಿಪಿ ಸೇರಿದಂತೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ನಾಲ್ಕೇ ದಿನಗಳಲ್ಲಿ ಕೋಲಾರ ಪೊಲೀಸರ ಸಹಕಾರದಲ್ಲಿ ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿತ್ತು.
ಈನ ಪ್ರಕರಣಕ್ಕೂ ಮುನ್ನ ಕರಾವಳಿಯಲ್ಲಿ ಸುಮಾರು ಒಂದು ತಿಂಗಳ ಅಂತರದಲ್ಲಿ ಗ್ಯಾಂಗ್ ವಾರ್, ಗಾಂಜಾ, ಹಣಕಾಸಿನ ವಿಚಾರದಲ್ಲಿ ಸರಣಿ 5 ಕೊಲೆಗಳ ಜತೆ ಕೊಲೆಯತ್ನ ಪ್ರಕರಣಗಳು ನಡೆದಿವೆ. ಅಷ್ಟೇ ಅಲ್ಲದೆ ದರೋಡೆಕೋರರ ತಂಡವೊಂದು ಕೊಕ್ಕಡ ಸೌತಡ್ಕ ಬಳಿಯ ಸಾಮಾಜಿಕ ಮುಖಂಡರೋರ್ವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿತ್ತು. ಈ ವೇಳೆ ಮನೆಯೊಡತಿಯ ಮೇಲೆ ಮಾರಣಾಂತಿಕ ಹ ನಡೆಸಿ ಪರಾರಿಯಾಗಿತ್ತು. ಈ ಪ್ರಕರಣವು ಕೂಡ ಪೊಲೀಸ್ ಇಲಾಖೆಗೆ ತಲೆನೋವಿನ ಜತೆಗೆ ನಿದ್ದೆಗೆಡಿಸಿದೆ.
Kshetra Samachara
26/12/2020 09:55 am