ಉಪ್ಪಿನಂಗಡಿ: ಪಂಚಾಯತ್ ಅಧೀನದ ಘನ ತ್ಯಾಜ್ಯ ಘಟಕಕ್ಕೆ ಮೀಸಲಿಟ್ಟ ಭೂಮಿಯ ಪರಿಶೀಲನೆಗೆಂದು ಹೋಗಿದ್ದ ಪಿಡಿಒ ಮತ್ತು ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೋರ್ವ ಮಾರಕಾಯುಧದೊಂದಿಗೆ ಆಗಮಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪಿಡಿಒ ವಿಲ್ಪ್ರೆಡ್ ರೋಡ್ರಿಗಸ್ ಮತ್ತು ಸಿಬ್ಬಂದಿ ಇಸಾಕ್ ಅವರು ಗುತ್ತಿಗೆದಾರರೊಂದಿಗೆ ಉಪ್ಪಿನಂಗಡಿ ಗ್ರಾಮದ ಅಜಿರಾಳ ಎಂಬಲ್ಲಿ ಪಂಚಾಯತ್ ಘನತ್ಯಾಜ್ಯ ಘಟಕಕ್ಕೆಂದು ಮೀಸಲಿಟ್ಟ 45 ಸೆಂಟ್ಸ್ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಪರಿಶೀಲನೆಗೆಂದು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿ ಮಾರಕಾಯುಧ ಝಳಪಿಳಿಸುತ್ತಾ ಇವರಿಗೆ ಅವ್ಯಾಚ ಪದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
07/10/2020 01:17 pm