ಕಡಬ: ಇಲ್ಲಿನ ಮರ್ದಾಳ ಸಮೀಪದ ಕೆರ್ಮಾಯಿ ಎಂಬಲ್ಲಿಂದ ಮೇಯಲು ಬಿಡುತ್ತಿರುವ ಜಾನುವಾರುಗಳನ್ನ ಸ್ಥಳೀಯ ಕೆಲವು ಪ್ರಮುಖ ಹಿಂದೂ ಮುಖಂಡರ ಸಹಕಾರದಿಂದಲೇ ಸಕಲೇಶಪುರ,ಹಾಸನ ಮೂಲದವರಿಗೆ ಕದ್ದು ಮಾರಾಟ ಮಾಡುವ ಘಟನೆ ನಡೆದಿದ್ದು, ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಬ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಪಂಜೋಡಿಯ ಗಂಗಾಧರ,
ಪುರುಷೋತ್ತಮ, ಕೀರ್ತಿ ಬೊಮ್ಮನಹಳ್ಳಿ, ಹೇಮಂತ್ ಕುಮಾರ್ ಚಿನ್ನಳ್ಳಿ, ಯದುಕುಮಾರ್ ಚಿನ್ನಳ್ಳಿ, ಆನಂದ ಎಂಬವರು ಬಂಧಿತರು.
ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಈ ಹೇಯ ಕೃತ್ಯದಲ್ಲಿ ಭಾಗಿಯಾಗಿದ್ದು, ಇಲ್ಲಿನ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮುಖಂಡರನ್ನು ತಲೆ ತಗ್ಗಿಸುವಂತೆ ಮಾಡಿದೆ.
ಈ ಬಗ್ಗೆ ಸ್ಥಳೀಯರೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಈಗ ಜನರು ಆಗಮಿಸುತ್ತಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಉದ್ವಿಗ್ನ ವಾತಾವರಣ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
Kshetra Samachara
03/10/2020 04:12 pm