ಬೆಳ್ಳಾರೆ: ಸವಣೂರಿನ ಶಾಂತಿನಗರ ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಆರಿಗಮಜಲು ಎಂಬಲ್ಲಿಂದ ರಸ್ತೆಬದಿಯ ದನವನ್ನು ಕದ್ದು ಮಾಂತೂರು ಶಾಂತಿನಗರದಲ್ಲಿ ಹತ್ಯೆಗೈದು ಮಾಂಸ ಮಾಡುವ ತಯಾರಿಯಲ್ಲಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೊಲೀಸರಿಂದ ದಾಳಿ ನಡೆದಿದೆ.
ಮಾಂಸಕ್ಕೆ ಸಿದ್ಧವಾಗಿದ್ದ ದನ ಮತ್ತು ಇತರ ಪರಿಕರ ವಶಕ್ಕೆ ಪಡೆಯಲಾಗಿದೆ, ಒಬ್ಬನನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ.
Kshetra Samachara
02/10/2020 12:00 pm