ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿ ಮನೆಗೆ ಶ್ರೀ ಗುರುದೇವಾನಂದ ಸ್ವಾಮೀಜಿ ಭೇಟಿ

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರಿನ ಬಾಡಿಗೆ ಮನೆಯೊಂದರಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿ ನೀಡಿದರು.

ಮೃತ ವಿದ್ಯಾರ್ಥಿನಿಯ ಫೋಷಕರಿಂದ ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬಿದರು.

ಈ ಸಂದರ್ಭ ಮಾತನಾಡಿದ ಅವರು ಈ ಒಂದು ಸಾವು ಬೇರೆಯೇ ರೀತಿಯಲ್ಲಿ ನಡೆದಿರುವುದಾಗಿ ಕಂಡು ಬರುತ್ತಿದೆ. ವಶೀಕರಣ ಬಳಕೆ ಮಾಡಿರುವ ಹಾಗೂ ಹೆದರಿಸಿ ಮಾಡಿರುವ ಘಟನೆಯೆಂದು ನಮಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದು ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಾಕ್ಷಿ ಕಂಡು ಬರುತ್ತಿಲ್ಲ.

ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು. ಸನಾತನ ಹಿಂದೂ ಧರ್ಮ ಇಂತಹ ವಿಚಾರ ಬಂದಾಗ ಒಗ್ಗಟ್ಟಾಗಬೇಕು ಜಾಗೃತಿಯಾಗಬೇಕು. ಇಂತಹ ದುಷ್ಕೃತ್ಯ ಸಮಾಜದಲ್ಲಿ ನಡೆಯಬಾರದು ಎಂದರು.

ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ರಘುರಾಮ ಶೆಟ್ಟಿ ಕನ್ಯಾನ, ಒಡಿಯೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ

ಲಿಂಗಪ್ಪ ಗೌಡ ಪಣೆಯಡ್ಕ, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಹೆಚ್, ದಿನೇಶ್ ಪಟ್ಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

06/05/2022 02:20 pm

Cinque Terre

8.44 K

Cinque Terre

0

ಸಂಬಂಧಿತ ಸುದ್ದಿ