ಮಂಗಳೂರು: ನಾಗದೇವರ ಕಲ್ಲಿಗೆ ದುಷ್ಕರ್ಮಿಗಳು ಹಾನಿಗೈದ ಘಟನೆ ನಗರದ ಕೋಡಿಕಲ್ ನಲ್ಲಿ ನಡೆದಿದೆ. ದೇವರ ವಿಗ್ರಹ ಕಲ್ಲನ್ನು ತೆಗೆದು ಹೊರಹಾಕಲಾಗಿದೆ. ಈ ಹೀನ ಕೃತ್ಯ ಖಂಡಿಸಿ, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಭಾಗದಲ್ಲಿ ಪದೇ ಪದೆ ಈ ರೀತಿಯ ಕೃತ್ಯಗಳು ನಡೆಯುತ್ತಿದೆ. ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅಲ್ಲದೆ, ನಾಳೆ ಸಂಜೆಯೊಳಗೆ ಆರೋಪಿಗಳ ಬಂಧನವಾಗದಿದ್ದರೆ ಸೋಮವಾರ ಕೋಡಿಕಲ್ ಪ್ರದೇಶವನ್ನು ಬಂದ್ ಮಾಡಲಾಗುವುದು ಎಂದು ಭಜರಂಗದಳ ತಿಳಿಸಿದೆ. ಘಟನಾ ಸ್ಥಳಕ್ಕೆ ಕಮಿಷನರ್ ಎನ್. ಶಶಿಕುಮಾರ್ , ಡಿಸಿಪಿಹರಿರಾಮ್ ಶಂಕರ್ , ಸ್ಥಳೀಯ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿದ್ದಾರೆ.
Kshetra Samachara
13/11/2021 03:56 pm