ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಮತಾಂತರ ಆರೋಪ; ಠಾಣೆ ಎದುರು ಹಿಂಜಾವೇ ಪ್ರತಿಭಟನೆ ಯತ್ನ

ಕೋಟ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಾಡಿ-ಹರ್ಕಾಡಿಯಲ್ಲಿ ಹಿಂದೂಗಳನ್ನು ಅನ್ಯಕೋಮಿಗೆ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂಜಾವೇ ಕಾರ್ಯಕರ್ತರು ಕೋಟ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆಗೆ ಯತ್ನಿಸಿದ ಘಟನೆ ಇಂದು ರಾತ್ರಿ ನಡೆದಿದೆ.

ಇಲ್ಲಿನ ಹಳ್ಳಾಡಿ ಸಮೀಪ ಹಿಂದೂ ಧರ್ಮದಿಂದ ಅನ್ಯಕೋಮಿಗೆ ಮತಾಂತರವಾದ ಕುಟುಂಬವೊಂದು ಸ್ಥಳೀಯ ಭೋವಿ ಸಮಾಜದವರನ್ನು ಗುರಿಯಾಗಿಸಿ ಆಮಿಷವೊಡ್ಡಿ ಹಲವು ಮಂದಿಯನ್ನು ಮತಾಂತರಗೊಳಿಸಿದೆ ಎನ್ನಲಾಗಿದ್ದು, ಭಾನುವಾರ ಕೂಡ ಇದೇ ರೀತಿ ಹಳ್ಳಾಡಿ-ಹರ್ಕಾಡಿಯ ಮನೆಯೊಂದಕ್ಕೆ ಹಲವರನ್ನು ಪ್ರಾರ್ಥನೆಗೆ ಆಹ್ವಾನಿಸಿದ್ದು, ವಿಷಯ ತಿಳಿದ ಹಿಂಜಾವೇ ಸದಸ್ಯರು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೇಳು ಮಂದಿಯನ್ನು ವಶಕ್ಕೆ ಪಡೆದರು.

ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಠಾಣೆ ಆವರಣಕ್ಕೆ ಧಾವಿಸಿ, ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಕೋಟ ಠಾಣಾಧಿಕಾರಿ ಸಂತೋಷ್ , ಹಿಂಜಾವೇ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜ್ಯೋತಿ, ಪ್ರಕಾಶ್, ಮನೋಹರ್, ರವಿ ಎಂಬವರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಭೋವಿ ಸಮಾಜದ ಉಡುಪಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಜಗದೀಶ್ ಕೆದೂರು ಮಾತನಾಡಿ, ಸಾಬ್ರಕಟ್ಟೆ, ಶಿರಿಯಾರ, ಹಳ್ಳಾಡಿ-ಹರ್ಕಾಡಿ ,ಕೆದೂರು ಸೇರಿದಂತೆ ಜಿಲ್ಲೆಯ ನಾನಾ ಭಾಗದ ಸಾವಿರಾರು ಮಂದಿ ನಮ್ಮ ಸಮಾಜದ ಬಡವರನ್ನು ಈಗಾಗಲೇ ಆಸೆ-ಆಮಿಷ ತೋರಿಸಿ ಮತಾಂತರಗೊಳಿಸಲಾಗಿದೆ. ಇದೇ ರೀತಿ ಮುಂದುವರಿದರೆ ನಾವೆಲ್ಲ ಹಿಂದೂ ಧರ್ಮದಿಂದ ದೂರವಾಗುವ ಅಪಾಯವಿದೆ. ಈ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದರು. ಜಾಗರಣ ವೇದಿಕೆ ಜಿಲ್ಲಾ ಮುಖಂಡ ಜಗದೀಶ್ ಕುಕ್ಕೆಹಳ್ಳಿ ಮಾತನಾಡಿದರು. ಹಿಂಜಾವೇ ಹಾಗೂ ಭೋವಿ ಸಂಘದ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

11/10/2021 03:45 pm

Cinque Terre

14.91 K

Cinque Terre

4

ಸಂಬಂಧಿತ ಸುದ್ದಿ