ಪಡುಪಣಂಬೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಉತ್ರಂಜೆ ಬಳಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿಯವರ ಮನೆತನದ ದೈವಸ್ಥಾನದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಲಾಗಿದೆ.
ದೈವಸ್ಥಾನದ ಮನೆಯ ಎದುರಿನ ಭಾಗದ ಬೀಗ ಒಡೆದು ನುಗ್ಗಿದ ಕಳ್ಳರು, ದೈವದ ಸೊತ್ತುಗಳಾದ ಕಂಚಿನ ದೀಪ, ದೈವದ ಮಂಚ, ಪಂಜುರ್ಲಿ ಮೂರ್ತಿ, ಎರಡು ಗ್ಯಾಸ್ ಸಿಲಿಂಡರ್,ಸ್ಟವ್, ಕಾಣಿಕೆ ಹಾಗೂ ದೈವದ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ.
ಭುಜಂಗ ಶೆಟ್ಟಿಯವರ ತಮ್ಮ ಮಾಧವ ಶೆಟ್ಟಿ ಪ್ರತಿದಿನ ಬೆಳಿಗ್ಗೆ ಬಂದು ದೈವಸ್ಥಾನದಲ್ಲಿ ದೀಪ ಬೆಳಗಿಸಿ ಹೋಗುತ್ತಿದ್ದು, ಮಂಗಳವಾರ ಹಾಗೂ ಬುಧವಾರ ಅನ್ಯ ಕಾರ್ಯನಿಮಿತ್ತ ಹೋಗಿರಲಿಲ್ಲ. ಇದನ್ನು ನೋಡಿಕೊಂಡೇ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಮಾಧವ ಶೆಟ್ಟಿ ಶಂಕಿಸಿದ್ದಾರೆ. ಮಾಧವ ಶೆಟ್ಟಿ ಯವರು ನೀಡಿದ ದೂರಿನಂತೆ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
22/04/2022 12:05 pm