ಕುಂದಾಪುರ: ಕೋಟದ ಅಚ್ಚಾಡಿ ಗ್ರಾಮದಲ್ಲಿ ಮಾಜಿ ಸೈನಿಕರೋರ್ವರಿಗೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ನಡೆದಿದೆ. ಸ್ಥಳೀಯ ನಿವಾಸಿ ಸುಬ್ಬಭಂಡಾರಿ ಹಲ್ಲೆಗೊಳಗಾದ ಮಾಜಿ ಸೈನಿಕರು ಎನ್ನಲಾಗಿದೆ.
ಇವರು ನಿನ್ನೆ ಬೆಳಿಗ್ಗೆ ಅಚ್ಚಾಡಿ ಗ್ರಾಮದಲ್ಲಿರುವ ತಮ್ಮಹಕ್ಕಿನ ಜಾಗದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಪಕ್ಕದ ಮನೆಯವರಾದ ಜಗನ್ನಾಥ ಶೆಟ್ಟಿ, ಗುಲಾಬಿ ಶೆಟ್ಟಿ ಹಾಗೂ ಇತರ ಇನ್ನಿಬ್ಬರು ಅಪರಿಚಿತರು ಸೇರಿ ಸುಬ್ಬ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/10/2022 02:47 pm