ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿ : ಮೇಯಲು ಬಿಟ್ಟ ಗೋವು ಕಳ್ಳತನ- ಪೊಲೀಸರ ಸಹಾಯದಿಂದ ಪತ್ತೆ

ಕುಂದಾಪುರ: ಮೇಯಲು ಬಿಟ್ಟಿದ್ದ ಜಾನುವಾರನ್ನು ಕಳ್ಳತನ ಮಾಡಲಾಗಿದ್ದು, ಕಳ್ಳತನ ಮಾಡಿದ ಜಾನುವಾರನ್ನು ಪೊಲೀಸರ ಸಹಾಯದಿಂದ ರಕ್ಷಿಸಿದ ಘಟನೆ ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಎಂಬಲ್ಲಿ ಶನಿವಾರ ನಡೆದಿದೆ.

ಸನ್ಯಾಸಿಬಲೆ ನಿವಾಸಿಯೊಬ್ಬರು ಸಾಕಿದ ಗಂಡು ಕರುವನ್ನು ಕಂಚುಗೋಡು ಭಾಗದ ಸನ್ಯಾಸಿ ಬಲೆ ವಠಾರದಲ್ಲಿ ಹಗ್ಗವನ್ನು ಮರಕ್ಕೆ ಕಟ್ಟಿ ಮೇಯಲು ಬಿಟ್ಟಿದ್ದರು. ಸಂಜೆ ವೇಳೆಗೆ ಕರುವನ್ನು ವಾಪಸ್ ಮನೆಗೆ ತರಲು ಹೊರಟಾಗ ಜಾನುವಾರು ಕಟ್ಟಿದ್ದ ಹಗ್ಗ ತುಂಡಾಗಿದ್ದನ್ನು ನೋಡಿ ಜಾನುವಾರುವಿಗಾಗಿ ಹುಡುಕಾಟ ನಡೆಸಿದರು. ನಾಲ್ಕೈದು ದಿನಗಳು ಕಳೆದರು ಜಾನುವಾರು ಪತ್ತೆಯಾಗದಿದ್ದಾಗ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗಂಗೊಳ್ಳಿ ಪೊಲೀಸರು ಕೆಲವೇ ಗಂಟೆಯೊಳಗೆ ಗೋವು ಕಳ್ಳರ ಜಾಲವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಕಳವು ಮಾಡಿದ ಕರುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ಮೇಯಲು ಬಿಟ್ಟ ಗೋವನ್ನು ಸನ್ಯಾಸಿಬಲೆ ನಿವಾಸಿಯಾದ ರೋಶನ್ ಫೆರ್ನಾಡಿಂಸ್ ಎಂಬುವರು ಕಳ್ಳತನ ನಡೆಸಿ ಗಂಗೊಳ್ಳಿ ಗ್ರಾಮದ ಸುಭಾನ್ ಎಂಬುವರಿಗೆ ನೀಡಿದ್ದು, ಸುಭಾನ್ ಅವರು ನೆರೆ ಮನೆಯ ತಬ್ರೇಜ್ ಎಂಬುವರ ಜಾಗದಲ್ಲಿ ಗೋವನ್ನು ಕಟ್ಟಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರೋಶನ್ ಫೆರ್ನಾಂಡಿಸ್ ಎಂಬುವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

26/09/2022 10:23 am

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ